ಸುಳ್ಯ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ 2023-24 ನೇ ಸಾಲಿನ ವಾರ್ಷಿಕ ಮಹಾಸಭೆಯು ಬ್ಯಾಂಕಿನ ಅಧ್ಯಕ್ಷ ಪ್ರಭಾಕರ ನಾಯಕ್ ರವರ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷ ಸೋಮನಾಥ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಸೆ.19 ರಂದು ಸುಳ್ಯ ಸಹಕಾರಿ ವ್ಯವಸಾಯಿಕ ಸಂಘದ ಸಭಾಭವನದಲ್ಲಿ ನಡೆಯಿತು.
ಆರಂಭದಲ್ಲಿ ಅಗಲಿದ ಬ್ಯಾಂಕಿನ ಸದಸ್ಯರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಬ್ಯಾಂಕಿನ ಪ್ರಭಾರ ವ್ಯವಸ್ಥಾಪಕಿ ಶ್ರೀಮತಿ ಉಷಾ ಸುವರ್ಣ ವಾರ್ಷಿಕ ವರದಿ ಮಂಡಿಸಿದರು.
ಪ್ರಸ್ತುತ ವರ್ಷದಲ್ಲಿ ಸಂಘದಲ್ಲಿ ಎ ತರಗತಿಯ ಸದಸ್ಯರು 3974 ಮಂದಿ ಇದ್ದಾರೆ. ಬಿ.ತರಗತಿ 3220 ಸದಸ್ಯರನ್ನು ಹೊಂದಿದೆ. ಪಾಲು ಬಂಡವಾಳ 1,49,06,157/- ಇರುವುದು. ವರ್ಷಾಂತ್ಯಕ್ಕೆ 1641.17 ಲಕ್ಷ ನಿರಖು ಠೇವಣಿ ಇದ್ದು ಉಳಿತಾಯ ಖಾತೆಯಲ್ಲಿ 62.29 ಲಕ್ಷ ಹಾಗೂ ಸಂಜೀವಿನಿ ಠೇವಣಿ 134.87 ಲಕ್ಷ ಇರುವುದು. ಪ್ರಸ್ತುತ ವರ್ಷದಲ್ಲಿ ಸದಸ್ಯರಿಗೆ ಒಟ್ಟು ರೂ. 3,86,93,655/- ಕೋಟಿ ಸಾಲ ವಿತರಿಸಲಾಗಿದೆ. ಹೊರ ಬಾಕಿ ಸಾಲ ರೂ.16,91,68,033/- ಕೋಟಿ ಇರುವುದು. ವರದಿ ಸಾಲಿನಲ್ಲಿ ರೂ.69.23 ಲಕ್ಷ ಬಡ್ಡಿ ಮನ್ನಾ ಸೌಲಭ್ಯ ಪಡೆದುಕೊಂಡಿರುತ್ತಾರೆ. ಪ್ರಸ್ತುತ ವಾರ್ಷಿಕ ವಾಗಿ ನಿವ್ವಳ ಲಾಭ 79.39 ಲಕ್ಷ ಗಳಿಸಿಕೊಂಡಿದೆ.ಬ್ಯಾಂಕಿನ ಒಟ್ಟು ವ್ಯವಹಾರ ರೂ.3,65,97,206/- ಆಗಿರುತ್ತದೆ.
ವೇದಿಕೆಯಲ್ಲಿ ಕೋಶಾಧಿಕಾರಿ ಶ್ರೀಮತಿ ಸುವರ್ಣಿನಿ ಎನ್.ಎಸ್, ಕ ನಿರ್ದೇಶಕರಾದ ಕು.ಭಾಗೀರಥಿ ಮುರುಳ್ಯ, ವಿಶ್ವನಾಥ ಬಿಳಿಮಲೆ, ರಮೇಶ್ ಪಿ, ಮಹಾವೀರ ಬಿ, ಚಂದ್ರಶೇಖರ ರೈ, ಶ್ರೀಮತಿ ದೇವಮ್ಮ ಎಸ್, ಶೇಷಪ್ಪ ಪಿ, ಭಗೀರಥ ಕೋಲ್ಚಾರು ಉಪಸ್ಥಿತರಿದ್ದರು. ಬ್ಯಾಂಕಿನ ಸದಸ್ಯರು ಭಾಗವಹಿಸಿದರು. ಸಿಬ್ಬಂದಿ ವರ್ಗದವರು ಸಹಕರಿಸಿದರು.