ಮಂಡೆಕೋಲು: ಶಾಲೆಗೆ ಬನ್ನಿ ಶನಿವಾರ-ಕಲಿಕೆ ಗೆ ನೀಡಿ ಸಹಕಾರ ಕಾರ್ಯಕ್ರಮ

0


ಮಂಡೆಕೋಲು ಸ.ಉ.ಹಿ.ಪ್ರಾ.ಶಾಲೆಯಲ್ಲಿ ನಡೆಯುವ ಶಾಲೆಗೆ ಬನ್ನಿ ಶನಿವಾರ-ಕಲಿಕೆಗೆ ನೀಡಿ ಸಹಕಾರ ಕಾರ್ಯಕ್ರಮ ಪ್ರಯುಕ್ತ ಸೆ.೨೧ ರಂದು ವಿಜಯವಾಣಿ ಪತ್ರಿಕೆಯ ವರದಿಗಾರ ಗಣೇಶ್ ಮಾವಂಜಿ ಸಂಪನ್ಮೂಲ ವ್ತಕ್ತಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಪ್ರೇರಣೆಯ ಮಾತುಗಳನ್ನಾಡಿ ಶಾಲೆ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಎಸ್‌ಡಿಎಂಸಿ ಅಧ್ಯಕ್ಷ ಸುರೇಶ್ ಕಣೆಮರಡ್ಕ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಗ್ರಂಥಪಾಲಕಿ ಶ್ರೀಮತಿ ಸಾವಿತ್ರಿ ಕಣೆಮರಡ್ಕ, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮಂಜುಳಾ ಉಪಸ್ಥಿತರಿದ್ದರು.


ಶಾಲಾ ವಿದ್ಯಾರ್ಥಿಗಳು, ಶಿಕ್ಷಕ ವೃಂದ ಸಹಕರಿಸಿದರು. ಮುಖ್ಯ ಶಿಕ್ಷಕಿ ಮಂಜುಳಾ ಎಂ.ಎಸ್.ಸ್ವಾಗತಿಸಿ, ಶಿಕ್ಷಕಿ ವನಿತಾ ಧನ್ಯವಾದಗೈದರು. ರಮೇಶ್ ಗಾಣಿಗ ಕಾರ್ಯಕ್ರಮ ನಿರೂಪಿಸಿದರು.