ಕರ್ನಾಟಕ ಫ್ಯಾಷನ್ ಶೋ 2024

0

ಸಮೃದ್ಧಿ ಗೂನಡ್ಕಳಿಗೆ ಪ್ರಥಮ ರನ್ನರ್ ಪ್ರಶಸ್ತಿ

ಕರ್ನಾಟಕ ಸಾಂಸ್ಕೃತಿಕ ಹಾಗೂ ಸಾಹಿತ್ಯ ಪರಿಷತ್ ನವರು ಸೆ.22ರಂದು ಮಡಿಕೇರಿಯ ಕುಬೇರ ಪಾರ್ಟಿ ಹಾಲ್ ನಲ್ಲಿ ನಡೆಸಿದ ಕರ್ನಾಟಕ ಫ್ಯಾಷನ್ ಶೋ 2024ರಲ್ಲಿ ಸಮೃದ್ಧಿ ಗೂನಡ್ಕಳಿಗೆ ಪ್ರಥಮ ರನ್ನರ್ ಪ್ರಶಸ್ತಿ ಲಭಿಸಿದೆ.

ಬಹುಮುಖ ಪ್ರತಿಭೆಯಾಗಿರುವ ಸಮೃದ್ದಿ ಈಗಾಗಲೇ ಹಲವು ಫ್ಯಾಶನ್ ಶೋ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗಿಟ್ಟಿಸಿದ್ದಾಳೆ.

ಗೂನಡ್ಕದ ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಎರಡನೇ ತರಗತಿಯಲ್ಲಿ ಓದುತ್ತಿರುವ ಈಕೆ ಸದಾನಂದ ಮತ್ತು ಸುಳ್ಯ ನಗರ ಪಂಚಾಯತ್ ಉದ್ಯೋಗಿ ಆಶಾ ದಂಪತಿಗಳ ಪುತ್ರಿ.