ಎಡಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

0

ಎಡಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ರಾಮಕೃಷ್ಣ ರೈಯವರ ಅಧ್ಯಕ್ಷತೆ ಯಲ್ಲಿ ಪಂಚಾಯತ್ ಸಭಾಂಗಣಫಲ್ಲಿ ಸೆಪ್ಟೆಂಬರ್ 23ರಂದು ನಡೆಯಿತು.

ಸಂಘವು 140 ಕೋಟಿ 10ಲಕ್ಷ 18ಸಾವಿರದ 256 ರೂಪಾಯಿ 82 ಪೈಸೆ ಲಾಭ ಗಳಿಸಿದೆ ಎಂದು ಹೇಳಿದರು.

ಉಪಾಧ್ಯಕ್ಷ ಪದ್ಮಯ್ಯ ನಾಯ್ಕ್ ಮುಳಿಯ ನಿರ್ದೇಶಕರಾದ ಗಿರೀಶ್ ನಡುಬೈಲು, ಕಮಲಾಕ್ಷ ಹೊಳೆ ಕೆರೆ, ಅವಿನಾಶ್ ದೇವರಮಜಲು, ತ್ಯಾಗರಾಜ್ ಹೊಸಮನೆ, ಶ್ರೀಮತಿ ಶುಭದಾ ಎಸ್ ರೈ, ಶ್ರೀಮತಿ ಸುಮಾ ನೂಚಿಲ, ರಾಘವ ಪೂಜಾರಿ ಜಾಲ್ತಾರ್, ಪುರಂದರ ರೈ ಬಲ್ಕಾಡಿ, ಕಾಂತು ದೇವಾಸ್ಯ, ಲಕ್ಷ್ಮಿ ನಾರಾಯಣ ಜಾಲ್ತಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಳೆದ ಸಾಲಿನಲ್ಲಿ ನಿಧನ ಹೊಂದಿದ ಸದಸ್ಯರಿಗೆ ಶ್ರದ್ಧಾಂಜಲಿ ಅರ್ಪಿಸಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಬರುವ ವರ್ಷ ಬೆಳ್ಳಿಹಬ್ಬ ಆಚರಿಸುವ ಬಗ್ಗೆ ಪ್ರಸ್ತಾಪಿಸಲಾಯಿತು. ಸದಸ್ಯರ ಸಲಹೆಯದಂತೆ ಕಟ್ಟಡ ಜೀರ್ಣೋದ್ದಾರ ಮಾಡಿ ಸಾಂಕೇತಿಕವಾಗಿ ಬೆಳ್ಳಿ ಹಬ್ಬ ಆಚರಿಸುವುದೆಂದು ನಿರ್ಣಯ ಮಾಡಲಾಯಿತು. ಸಂಘದ ಕಾರ್ಯನಿರ್ವಾಹಣಾಧಿಕಾರಿ ರಮೇಶ್ ದೋಳ್ತಿಲ ಸಭೆ ನಡವಳಿ ನಡೆಸಿ ವರದಿ ವಾಚಿಸಿದರು, ವಿಜಯ. ರಾಮಣ್ಣ ಖಂಡಿಗ ಪ್ರಾರ್ಥಿಸಿದರು ನಿರ್ದೇಶಕ ಗಿರೀಶ್ ನಡುಬೈಲ್ ಸ್ವಾಗತಿಸಿದರು ಹಿರಿಯ ಗುಮಸ್ತ ನವೀನ್ ಕುಮಾರ್ ಕೆ, ಎಸ್, ಕಿರಿಯ ಗುಮಸ್ತ ಕುಂನ್ಯಣ್ಣ ಎ, ಗುಮಸ್ತ ಅಶ್ವತ್ ಜೆ ಹಾಗೂ ಸದಸ್ಯರು, ಪಿಗ್ಮಿ ಸಂಗ್ರಗಾರರು ಸೀತಾರಾಮ ಡಿ, ನವೋದಯ ಪ್ರೇರಕರು ಶ್ರೀಮತಿ ಲಕ್ಷ್ಮಿ, ಸಹಕರಿಸಿದರು. ನಿರ್ದೇಶಕ ಅವಿನಾಶ್ ದೇವರ ಮಜಲು ವಂದಿಸಿದರು.
(ಚಿತ್ರ ವರದಿ :ಸಂಕಪ್ಪ ಸಾಲಿಯಾನ್)