ಪಡ್ಪಿನಂಗಡಿ:ಕಣ್ಣಿನ ಉಚಿತ ತಪಾಸಣಾ ಶಿಬಿರ

0

ಸ. ಹಿ. ಪ್ರಾ. ಶಾಲೆ ಪಡ್ಪಿನಂಗಡಿ ಮತ್ತು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ. ಹಿರಿಯ ವಿದ್ಯಾರ್ಥಿ ಸಂಘ. ಇವರ ಸಹಭಾಗಿತ್ವದಲ್ಲಿ ನ್ಯೂ ವಿಷನ್ ಜನರೇಷನ್ ಪ್ರೋಗ್ರಾಮ್ ಕಾರ್ಯಕ್ರಮದಡಿಯಲ್ಲಿ 2.5 ಎನ್. ವಿ.ಜಿ ಐ ಮಿತ್ರ ಸುರತ್ಕಲ್. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ( ಅಂಧತ್ವ ವಿಭಾಗ ) ಇವರ ಜಂಟಿ ಆಶ್ರಯದಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರ ಸೆ. 23 ರಂದು ಪಡ್ಪಿನಂಗಡಿ ದ. ಕ. ಜಿ. ಪಂ. ಸ. ಹಿ. ಪ್ರಾ. ಶಾಲೆಯಲ್ಲಿ ನಡೆಯಿತು ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷ ದಾವೂದ್ ಮುಚ್ಚಿಲ ವಹಿಸಿದ್ದರು.

ನಿವೃತ್ತ ಮುಖ್ಯ ಶಿಕ್ಷಕ ವಾಸುದೇವ ನಡ್ಕ ಉದ್ಘಾಟಿಸಿ ಶುಭ ಹಾರೈಸಿದರು. ಕಣ್ಣಿನ ತಪಾಸಣೆ ಮಹತ್ವದ ಬಗ್ಗೆ ನ್ಯೂ ವಿಷನ್ ಮೆನೇಜರ್ ಡಾ. ರಾಮಚಂದ್ರ ರವರು ಮಾಹಿತಿ ನೀಡಿದರು. ಪಂಜ ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿ ಜಯಂತ.ಕೆ. ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜಯಂತ ಕೆ ಸ್ವಾಗತಿಸಿದರು.ಮುಖ್ಯ ಶಿಕ್ಷಕಿ ಶ್ರೀಮತಿ ಧರ್ಮಾವತಿ.ಟಿ ವಂದಿಸಿದರು..ಸಹ ಶಿಕ್ಷಕಿ ಶ್ರೀಮತಿ ಸರೋಜಿನಿ.ಕೆ. ಹಾಗೂ ಸಹ ಶಿಕ್ಷಕಿ ಕುಮಾರಿ ಲಾವಣ್ಯ ಸಹ ಶಿಕ್ಷಕಿ ನಿರೂಪಿಸಿದರು. ಶಾಲಾ ಮಕ್ಕಳು, ಪೋಷಕರು ಹಾಗೂ ಊರಿನ ನೂರಾರು ಮಂದಿ ಕಣ್ಣಿನ ಪರೀಕ್ಷೆ ಮಾಡಿಕೊಂಡು ಉಚಿತ ಕನ್ನಡಕ ಪಡೆದುಕೊಂಡರು.