ವಿಜಯ ಕರ್ನಾಟಕ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಇವರು ವಿಶ್ವ ಪರಿಶರ ದಿನ ಅಂಗವಾಗಿ ಏರ್ಪಡಿಸಿದ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಾಥಮಿಕ ವಿಭಾಗದಲ್ಲಿ ಸುಳ್ಯ ರೋಟರಿ ಶಾಲಾ 7ನೇ ತರಗತಿಯ ವಿಧ್ಯಾರ್ಥಿ ಶ್ರೀತನ್ ಪಿ.ದ್ವಿತೀಯ ಬಹುಮಾನ ಪಡೆದರೆ, ಪ್ರೌಢಶಾಲಾ ವಿಭಾಗದಲ್ಲಿ 8ನೇ ತರಗತಿಯ ವಿಧ್ಯಾರ್ಥಿನಿ ವಂಶಿ ಬಿ ಆರ್. ತ್ರತೀಯ ಬಹುಮಾನ ಪಡೆದಿರುತ್ತಾರೆ.
ಇತ್ತೀಚಿಗೆ ಮಂಗಳೂರಿನ ಒಷಿಯನ್ ಪರ್ಲ್ ಹೋಟೆಲ್ ನಲ್ಲಿ ಜರಗಿದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವಲಯ ಕಛೇರಿ ಹಿರಿಯ ಪರಿಸರ ಅಧಿಕಾರಿ ವಿಜಯಾ ಹೆಗಡೆ ಪ್ರಶಸ್ತಿ ಯನ್ನು ವಿತರಿಸಿದರು. ಸ್ಪರ್ಧೆಯಲ್ಲಿ ಒಟ್ಟು ಜಿಲ್ಲೆಯ 305 ಶಾಲೆಗಳು ಪಾಲ್ಗೊಂಡಿದ್ದು, 15000+ ವಿಧ್ಯಾರ್ಥಿಗಳು ಭಾಗವಹಿಸಿದ್ದು ,ಅಂತಿಮ ಸುತ್ತಿಗೆ 921 ವಿಧ್ಯಾರ್ಥಿಗಳು ಆಯ್ಕೆಯಾಗಿದ್ದರು.ಪ್ರಶಸ್ತಿ ಪಡೆದ ವಿದ್ಯಾರ್ಥಿಗನ್ನು ಶಾಲಾ ಸಂಚಾಲಕರು ,ಮುಖ್ಯೊಪಾಧ್ಯಯರು ಅಭಿನಂದಿಸಿರುತ್ತಾರೆ.