ಜಾಲ್ಸೂರು ಗ್ರಾಮದ ಬೈತಡ್ಕ- ಹೊಸಗದ್ದೆ ಪಂಚಾಯತ್ ರಸ್ತೆ ತೀರಾ ಹದಗೆಟ್ಟಿದ್ದು, ದುರಸ್ಥಿ ಪಡಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಈ ಹಿಂದೆ ಹಾಕಿದ ಡಾಂಬರ್ ಎದ್ದು ಹೋಗಿದ್ದು ರಸ್ತೆ ಹೊಂಡ ಕಲ್ಲುಗಳಿಂದ ಕೂಡಿದ್ದು ವಾಹನವನ್ನು ಓಡಿಸಲು ಮತ್ತು ನಡೆದಾಡಲು ಬಹಳ ಕಷ್ಟಕರವಾಗಿದೆ ಮತ್ತು ರಸ್ತೆ ಬದಿಯಲ್ಲಿ ಕಣಿ ಇಲ್ಲದೆ ಮಳೆಗಾಲದಲ್ಲಿ ನೀರು ರಸ್ತೆಯಲ್ಲೇ ಹರಿಯುತ್ತದೆ. ಆದುದರಿಂದ ಸಂಬಂಧ ಪಟ್ಟ ರವರು ಈ ಬಗ್ಗೆ ಕ್ರಮ ವಹಿಸಿ ದುರಸ್ತಿ ಮತ್ತು ಕಾಮಗಾರಿಗಳನ್ನು ನಡೆಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.