ಸುಳ್ಯ ಗೌಡರ ಯುವ ಸೇವಾ ಸಂಘ ಹಾಗೂ ಗೌಡ ಮಹಿಳಾ ಘಟಕದ ವತಿಯಿಂದ ಸಾಧಕಿ ಉಪನ್ಯಾಸಕಿ ಬೇಬಿ ವಿದ್ಯಾ ರವರಿಗೆ ಸನ್ಮಾನ

0

ಶಿಕ್ಷಕರ ದಿನಾಚರಣೆಯ ಅಂಗವಾಗಿ ಸುಳ್ಯ ರೋಟರಿ ಕ್ಲಬ್ ಇವರು ಕೊಡಮಾಡಿದ “ನೇಷನ್ ಬಿಲ್ಡರ್ ಅವಾರ್ಡ್ “ಮತ್ತು ದ ಕ ಜಿಲ್ಲಾ ಪ.ಪೂ ಪ್ರಾಚಾರ್ಯರ ಸಂಘ(ರಿ )ಮಂಗಳೂರು,ಹಾಗೂ ವಿವಿಧ ವಿಷಯವಾರು ಉಪನ್ಯಾಸಕರ ಸಂಘ, ದೈ. ಶಿಕ್ಷಣ ಉಪನ್ಯಾಸಕರ ಸಂಘ, ಆಳ್ವಾಸ್ ಪಪೂ ಕಾಲೇಜು ಮೂಡಬಿದಿರೆ ಇವರ ವತಿಯಿಂದ “ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ”ಗೆ ಭಾಜನರಾದ ಪ್ರತಿಷ್ಠಿತ ಸುಳ್ಯ ನೆಹರು ಮೆಮೋರಿಯಲ್ ಪಪೂ ಕಾಲೇಜು ಮತ್ತು ಕೆವಿಜಿ ಕಾನೂನು ಕಾಲೇಜಿನ ಕನ್ನಡ ಉಪನ್ಯಾಸಕಿ, ಬಹುಮುಖ ಪ್ರತಿಭಾನ್ವಿತೆ ಬೇಬಿ ವಿದ್ಯಾ ಪಿ ಬಿ ಅವರನ್ನು ಗೌಡರ ಯುವ ಸೇವಾ ಸಂಘ (ರಿ ಸುಳ್ಯ,ಸುಳ್ಯ ತಾಲೂಕು ಗೌಡ ಮಹಿಳಾ ಘಟಕದ ವತಿಯಿಂದ ಸುಳ್ಯದ ವೆಂಕಟ್ರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಸಭಾಂಗಣದಲ್ಲಿ ಸೆ. 27 ರಂದು ಸನ್ಮಾನಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ಗೌಡ ಮಹಿಳಾ ಘಟಕದ ಅಧ್ಯಕ್ಷೆ ವಿನುತಾ ಪಾತಿಕಲ್ಲು ವಹಿಸಿದ್ದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ತಾಲೂಕು ಗೌಡರ ಯುವ ಸೇವಾ ಸಂಘದ ಸ್ಥಾಪಕ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಅವರು ಮಾತನಾಡಿ, “ಬೇಬಿ ವಿದ್ಯಾ ಅವರು ಸಮಾಜದಲ್ಲಿ ತನ್ನ ಪ್ರತಿಭೆ, ಅತ್ಯುತ್ತಮ ನಿರೂಪಣಾ ಶೈಲಿಯಿಂದ ಎಲ್ಲರ ಪ್ರಶoಸೆಗೆ ಪಾತ್ರರಾದವರು ಹಾಗೂ ಉತ್ತಮ ಗುಣ ಸ್ವಭಾವ ಹೊಂದಿದವರು” ಎಂದು ಪ್ರಶoಶಿಸಿದರು.

ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್ ಗಂಗಾಧರ್ ಅವರು ಮಾತನಾಡಿ, “ಬೇಬಿ ವಿದ್ಯಾ ಪ್ರತಿಭಾ ಶಕ್ತಿಯಿಂದ ಗುರುತಿಸಿಕೊಂಡವರು. ತನ್ನ ಪಾಲಿಗೆ ಬಂದ ಕಾರ್ಯಕ್ರಮವನ್ನು ಶ್ರದ್ದೆಯಿಂದ ನಿರೂಪಿಸುವವರು. ಇವರ ಸಾಧನೆಯ ಹಿಂದೆ ಹೆತ್ತವರ ಸ್ಫೂರ್ತಿ ಇದೆ ” ಎಂದು ನೆನಪಿಸಿಕೊಂಡರು.

ವೇದಿಕೆಯಲ್ಲಿ ಅತಿಥಿಗಳಾಗಿ ಉಪಸ್ಥಿತರಿದ್ದ ಸುಳ್ಯ ತಾಲೂಕು ಗೌಡ ಮಹಿಳಾ ಗೌಡ ಘಟಕದ ಸ್ಥಾಪಕಾಧ್ಯಕ್ಷೆ ರೇಣುಕಾ ಸದಾನಂದ ಜಾಕೆ, ಸುಳ್ಯ ತಾಲೂಕು ಗೌಡ ಮಹಿಳಾ ಘಟಕದ ನಿಕಟ ಪೂರ್ವ ಅಧ್ಯಕ್ಷೆ ಪುಪ್ಪಾ ರಾಧಾಕೃಷ್ಣ ಮಾಣಿಬೆಟ್ಟು ಸಾಧಕಿ ಉಪನ್ಯಾಸಕಿಗೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಗೌಡರ ಯುವ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ತೀರ್ಥರಾಮ ಅಡ್ಕಬಳೆ, ವೆಂಕಟ್ರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಪ್ರಧಾನ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಟಿ ವಿಶ್ವನಾಥ್, ಸುಳ್ಯ ತಾಲೂಕು ಗೌಡ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಸವಿತಾ ಸಂದೇಶ್ ನಡುಮುಟ್ಲು, ಕೋಶಾಧಿಕಾರಿ ಜಯಶ್ರೀ ರಾಮಚಂದ್ರ ಪಲ್ಲತಡ್ಕ ಉಪಸ್ಥಿತರಿದ್ದರು.

ಗೌಡ ಮಹಿಳಾ ಘಟಕದ ಅಧ್ಯಕ್ಷೆ ವಿನುತಾ ಪಾತಿಕಲ್ಲು ಸ್ವಾಗತಿಸಿ, ಕಾರ್ಯದರ್ಶಿ ಸವಿತಾ ಸಂದೇಶ್ ಪರಿಚಯ ಪತ್ರ ವಾಚಿಸಿದರು.ಚಂದ್ರಾವತಿ ಮೋನಪ್ಪ ಚಿದ್ಗಲ್ ವಂದಿಸಿದರು. ಸುಳ್ಯ ತಾಲೂಕು ಗೌಡ ಮಹಿಳಾ ನಗರ ಘಟಕದ ಅಧ್ಯಕ್ಷೆ ಹರ್ಷ ಕರುಣಾಕರ, ತಾಲೂಕು ಗೌಡ ಮಹಿಳಾ ಘಟಕದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.