ಸುಳ್ಯ ತಾಲೂಕು ಪಿಗ್ಮಿ ಸಂಗ್ರಾಹಕರ ಸಂಘದ ವಾರ್ಷಿಕ ಮಹಾಸಭೆ – ಸನ್ಮಾನ

0

ಸುಳ್ಯ ತಾಲೂಕು ಪಿಗ್ಮಿ ಸಂಗ್ರಾಹಕರ ಸಂಘದ ವಾರ್ಷಿಕ ಮಹಾಸಭೆಯು ಸೆ.29 ರಂದು ಸುಳ್ಯ ಶ್ರೀರಾಮ ಪೇಟೆಯ ಕಾನತ್ತಿಲ ದೇವಮ್ಮ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.
ಸಭಾ ಕಾರ್ಯಕ್ರಮವನ್ನು ನಿವೃತ್ತ ಲೆಕ್ಕ ಪರಿಶೋಧಕ ರತ್ನಾಕರ ಗೌಡ ಬಳ್ಳಡ್ಕರವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು. ಅಧ್ಯಕ್ಷತೆಯನ್ನು ಪಿಗ್ಮಿ ಸಂಗ್ರಾಹಕರ ಸಂಘದ ಅಧ್ಯಕ್ಷ ಹರಿಶ್ಚಂದ್ರ ಯಂ. ವಹಿಸಿದ್ದರು.

ವೇದಿಕೆಯಲ್ಲಿ ಪಿಗ್ಮಿ ಸಂಗ್ರಾಹಕರ ಸಂಘದ ಕಾನೂನು ಸಲಹೆಗಾರರಾದ ದಿನೇಶ್ ಮಡಪ್ಪಾಡಿ ಉಪಸ್ಥಿತರಿದ್ದು ಮಾತನಾಡಿದರು.
ಸಂಘದ ಕಾರ್ಯದರ್ಶಿ ಸುನಿಲ್ ಜಿ.ವರದಿ ಮಂಡಿಸಿದರು. ಸಂಘದ ಕಾರ್ಯದರ್ಶಿ ಪುಷ್ಪಾದರ ಲೆಕ್ಕಪತ್ರ ಮಂಡಿಸಿದರು. ಸಿ.ಎ.ಬ್ಯಾಂಕಿನ ನಿವೃತ್ತ ಲೆಕ್ಕಪರಿಶೋಧಕ ರತ್ನಾಕರ ಗೌಡ ಬಿ.ಯವರನ್ನು ಶಾಲು ಹೊದಿಸಿ,ಫಲ,ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

1 ರಿಂದ 7 ನೇ ತರಗತಿವರೆಗಿನ ಸಂಘದ ಸದಸ್ಯರ ಮಕ್ಕಳಿಗೆ ಬರೆಯುವ ಪುಸ್ತಕಗಳನ್ನು ಸಂಘದ ವತಿಯಿಂದ ನೀಡಲಾಯಿತು. 7 ,10 ಮತ್ತು 12 ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಶೇ.90 ಕ್ಕಿಂತ ಅಧಿಕ ಅಂಕ ಪಡೆದ ಸಂಘದ ಸದಸ್ಯರ ಮಕ್ಕಳನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ವಸಂತ ಬೋರ್ಕರ್,ಗೌರವ ಸಲಹೆಗಾರರಾದ ವೆಂಕಟ್ರಮಣ ಮುಳ್ಯ ಉಪಸ್ಥಿತರಿದ್ದರು.


ಸಂಘದ ಅಧ್ಯಕ್ಷ ಹರಿಶ್ಚಂದ್ರ ಎಂ.ಸ್ವಾಗತಿಸಿ,ಆರತಿ ಪುರುಷೋತ್ತಮರವರು ಪ್ರಾರ್ಥಿಸಿ,ಜತೆ ಕಾರ್ಯದರ್ಶಿ ಮಹಾಬಲ ರೈ ವಂದಿಸಿದರು.
ರಾಮಚಂದ್ರ ಯದುಗಿರಿ ಕಾರ್ಯಕ್ರಮ ನಿರೂಪಿಸಿದರು. ನವಂಬರ್ ತಿಂಗಳಲ್ಲಿ ತಾಲೂಕಿನ ಎಲ್ಲಾ ಪಿಗ್ಮಿ ಸಂಗ್ರಾಹಕರಿಗೆ ಮಾಹಿತಿ ಕಾರ್ಯಕ್ರಮ ನಡೆಯಲಿದೆ.
ಸಂಘದ ಕಾನೂನು ಸಲಹೆಗಾರರಾದ ದಿನೇಶ್ ಮಡಪ್ಪಾಡಿ ಮಾಹಿತಿ ನೀಡಲಿರುವರು.