ಕೆಎನ್‌ಎಸ್‌ಎಸ್ ಸುಳ್ಯ ಕರಯೋಗಂ ವತಿಯಿಂದ ಓಣಂ ಆಚರಣೆ ಮತ್ತು ಕುಟುಂಬ ಸಮ್ಮಿಲನ

0

ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿಯ ಸುಳ್ಯ ಕರಯೋಗಂ ವತಿಯಿಂದ ಓಣಂ ಆಚರಣೆ ಮತ್ತು ಕುಟುಂಬ ಸಮ್ಮಿಲನ ಕಾರ್ಯಕ್ರಮ ಲಯನ್ಸ್‌ ಕ್ಲಬ್ ಸಭಾಂಗಣದಲ್ಲಿ‌ ನಡೆಯಿತು.

ಕೇರಳ ಎನ್‌ಎಸ್‌ಎಸ್ ಹೊಸದುರ್ಗ ತಾಲೂಕು ಕರಯೋಗಂ ಮಾಜಿ ಕಾರ್ಯದರ್ಶಿ ಆರ್. ಮೋಹನ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ವಿಶೇಷ ಉಪನ್ಯಾಸ ನೀಡಿದರು.

ಸಮುದಾಯ ಸಂಘಟನೆಯೊಂದಿಗೆ ಸಂಸ್ಕೃತಿ ಪ್ರಸರಣ ಇಂಥ ಹಬ್ಬಗಳ ಆಚರಣೆಗಳಿಂದ ಸಾಧ್ಯವಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಸುಳ್ಯ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ.ಡಿ.ವಿ.ಲೀಲಾಧರ, ಕೆಎನ್‌ಎಸ್‌ಎಸ್ ಮಂಗಳೂರು ಇದರ ಬೋರ್ಡ್ ಮೆಂಬರ್ ರಾಜನ್ ನಂಬ್ಯಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.

ಕೆಎನ್‌ಎಸ್‌ಎಸ್ ಸುಳ್ಯ ಕರಯೋಗಂ ಅಧ್ಯಕ್ಷ ಕೃಷ್ಣನ್ ನಾಯರ್ ಕುತ್ತಮೊಟ್ಟೆ ಅಧ್ಯಕ್ಷತೆ ವಹಿಸಿದ್ದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮುದಾಯದ ವಿಶ್ವನಾಥನ್ ನಾಯರ್ ಮಧುವನ, ಪ್ರಭಾಕರನ್ ನಾಯರ್ ಸ್ವಾಗತ್, ಹರಿದಾಸ್ ಪಾಲಡ್ಕ, ಚಂದ್ರಶೇಖರ ನಾಯರ್ ಸುಬ್ರಹ್ಮಣ್ಯ ಅವರನ್ನು ಸನ್ಮಾನಿಸಲಾಯಿತು.

ವಿವಿಧ ದಾನಿಗಳು ಪ್ರಾಯೋಜಿಸಿದ ದತ್ತಿನಿಧಿಯ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ವಿತರಿಸಲಾಯಿತು. ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕೆಎನ್‌ಎಸ್‌ಎಸ್ ಮಹಿಳಾ ಘಟಕದ ಅಧ್ಯಕ್ಷೆ ಭವಾನಿ ಮುಂಡಾತ್ ಬಾರ್ಪಣೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕು. ಶ್ರೀಲಯ ಪ್ರಾರ್ಥಿಸಿದರು. ಕೆಎನ್‌ಎಸ್ಎಸ್ ಸುಳ್ಯ ಕರಯೋಗಂ ಕಾರ್ಯದರ್ಶಿ ಶಶಿಧರನ್ ನಾಯರ್ ಉಬರಡ್ಕ ವಂದಿಸಿದರು. ದುರ್ಗಾಕುಮಾರ್ ನಾಯರ್ ಕೆರೆ, ಅಂಬಿಕಾ ಚಂದ್ರಶೇಖರ್, ಶೈಲಜಾ ಜಯರಾಜ್ ನಿರೂಪಿಸಿದರು.


ಖಜಾಂಜಿ ಪ್ರಭಾಕರನ್ ನಾಯರ್, ಶ್ರೀಕಲಾ ಬಾಲಕೃಷ್ಣನ್, ಅರುಣಾ ಪ್ರಮೋದ್ ವಿವಿಧ ಕಾರ್ಯಕ್ರಮ‌ ನಿರೂಪಿಸಿದರು.

ಓಣಂ ಆಚರಣೆಯ ಅಂಗವಾಗಿ ಪೂಕಳಂ, ವಿವಿಧ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಬಾಲಕೃಷ್ಣ ನಾಯರ್ ನೀರಬಿದಿರೆ ನಿರ್ದೇಶನದಲ್ಲಿ ‘ಕೃಷ್ಣ ಲೀಲೆ’ ಯಕ್ಷ ವೈಭವ ನಡೆಯಿತು. ಓಣಂ ಸದ್ಯ ಏರ್ಪಡಿಸಲಾಗಿತ್ತು.