ರಾಜ್ಯವು ಕರ್ನಾಟಕವೆಂದು ನಾಮಕರಣಗೊಂಡು 5 ದಶಕಗಳು ಪೂರೈಸಿದ ಹಿನ್ನೆಲೆಯಲ್ಲಿ ಸಂಚರಿಸುವ ‘ಕರ್ನಾಟಕ ಸುವರ್ಣ ಸಂಭ್ರಮ ರಥ’ವನ್ನು ಸುಳ್ಯದ ಶಾಸ್ತ್ರಿ ವೃತ್ತದಲ್ಲಿ ಇಂದು ಮಧ್ಯಾಹ್ನ ಬರಮಾಡಿಕೊಳ್ಳಲಾಯಿತು.
ಗಣ್ಯರು ತಾಯಿ ನಾಡದೇವಿ ಭುವನೇಶ್ವರಿಗೆ ಪುಷ್ಪಾರ್ಚನೆ ಮಾಡಿ ಅದ್ಧೂರಿಯಾಗಿ ಸ್ವಾಗತಿಸಿದರು. ಕರ್ನಾಟಕ ರಾಜ್ಯವೆಂದು ನಾಮಕರಣವಾಗಿ 50 ವರ್ಷ ಪೂರ್ಣಗೊಂಡ ಹಿನ್ನೆಲೆ ಸುವರ್ಣ ಸಂಭ್ರಮ ರಥಯಾತ್ರೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ರಾಜ್ಯದ್ಯಾಂತ ಹಮ್ಮಿಕೊಳ್ಳಲಾಗಿದೆ.
ಸುಳ್ಯ ತಹಶಿಲ್ದಾರ್ ಅರವಿಂದ್ ಕೆ.ಎಂ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ ,ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ ಎಂ.ಎಚ್, ಕ್ಷೇತ್ರ ಶಿಕ್ಷಣಾಧಿಕಾರಿ ಯು.ಕೆ.ಶೀತಲ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಪೇರಾಲು ಮತ್ತಿತರರು ಹಾರಾರ್ಪಣೆ ಮಾಡಿ, ಪುಷ್ಪಾರ್ಚನೆ ಮಾಡಿದರು.
ವಿವಿಧ ಇಲಾಖೆಗಳ ಅಧಿಕಾರಿಗಳು, ಕಸಾಪ ಪದಾಧಿಕಾರಿಗಳು, ಲಯನ್ಸ್, ರೋಟರಿ, ಜೇಸಿ ಸೇರಿದಂತೆ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಶಿಕ್ಷಕರು,ಕನ್ನಡಾಭಿಮಾನಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬೆಳ್ತಂಗಡಿ, ಕಡಬ ತಾಲೂಕುಗಳಲ್ಲಿ ಸಂಚರಿಸಿದ ರಥ ಬಳಿಕ ಸುಳ್ಯಕ್ಕೆ ಆಗಮಿಸಿತು.
ಶಾಸ್ತ್ರೀ ವೃತ್ತದಿಂದ ಗಾಂಧಿನಗರ ತನಕ ರಥ ಸಂಚರಿಸಿ ನಾಳೆ ಪುತ್ತೂರಿಗೆ ತೆರಳಲಿದೆ.