ನಿಂತಿಕಲ್ಲಿನ ಸುಂದರ ಗೌಡ ಮತ್ತು ಶೇಷವೇಣಿ ದಂಪತಿಯ ಮೊಮ್ಮಗ ಲಿಹಾನ್ ನ ಒಂದು ವರ್ಷದ ಹುಟ್ಟುಹಬ್ಬವನ್ನು ವಸಂತ ರತ್ನ ಬಿನ್ನಸಾಮರ್ಥ್ಯದ ವಸತಿ ಶಾಲೆಯಲ್ಲಿ ಅ. 1ರಂದು ಆಚರಿಸಲಾಯಿತು.
ಲಿಹಾನ್ ನ ತಂದೆ ಯತೀಶ್, ತಾಯಿ ಶ್ರೀಮತಿ ಜಯಶ್ರಿ, ಅಕ್ಕ ಇಷಾನಿ, ಮಾವ ಭವನ್ ರಾಜ್ ಹಾಗೂ ಬಂದು ಮಿತ್ರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕೇಕ್ ಕತ್ತರಿಸಿ, ಸಮವಸ್ತ್ರ ವಿತರಿಸಿ, ವಿಶೇಷ ಮಕ್ಕಳೊಂದಿಗೆ ಭೋಜನವನ್ನು ಮಾಡಲಾಯಿತು. ವಿದ್ಯಾವಾರಿಧಿ ಚಾರಿಟಬಲ್ ಟ್ರಸ್ಟ್ ನ ಪದಾಧಿಕಾರಿಗಳು, ವಿಶೇಷ ಶಿಕ್ಷಕಿ ಶ್ರೀಮತಿ ಸವಿತ ಹಾಗೂ ಪರಿಚಾರಕಿ ಶಿಲ್ಪ ಉಪಸ್ಥಿತರಿದ್ದರು.