ಕಳೆದ 55 ವರ್ಷಗಳಿಂದ ಸಂಪಾಜೆ ಗ್ರಾಮದ ಕಲ್ಲುಗುಂಡಿಯಲ್ಲಿ ನ್ಯಾಷನಲ್ ಸ್ಟೋರ್ ಎಂಬ ದಿನಸಿ ಅಂಗಡಿಯನ್ನು ಪ್ರಾರಂಭಿಸಿ, ಹಲವು ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದ ಹಾಜಿ ಅಬ್ಬಾಸ್ ಗೂನಡ್ಕರವರು ತಮ್ಮ ವ್ಯಾಪಾರ ಜೀವನದಿಂದ ನಿವೃತ್ತರಾಗಿದ್ದು, ಅವರಿಗೆ ಗೂನಡ್ಕ ಕುಟುಂಬದ ಪರವಾಗಿ ಅ.1ರಂದು ಗೌರವಾರ್ಪಣೆಯನ್ನು ಸಲ್ಲಿಸಲಾಯಿತು.
ಗೂನಡ್ಕ ಬದ್ರಿಯಾ ಜುಮಾ ಮಸೀದಿಯ ಖತೀಬರಾದ ಅಬೂಬಕ್ಕರ್ ಸಿದ್ದೀಕ್ ಸಖಾಫಿ ಅಲ್ ಅರ್ಷದಿ, ಇಬ್ರಾಹಿಂ ಗೂನಡ್ಕ, ಎಲ್.ಟಿ.ಅಬ್ದುಲ್ ರಜಾಕ್ ಪುತ್ತೂರು, ಮಹಮ್ಮದ್ ಕುಂಞಿ ಗೂನಡ್ಕ, ಅಬ್ದುಲ್ಲ ಮುಸ್ಲಿಯಾರ್, ಶೌವಾದ್ ಗೂನಡ್ಕ, ಜಾಫರ್ ಸಾದಿಕ್ ಗೂನಡ್ಕ, ಜಿ.ಜಿ.ಚಂದ್ರವಿಲಾಸ ಗೂನಡ್ಕ, ಬಿ.ಎಫ್.ಇಬ್ರಾಹಿಂ, ಸಂಶುದ್ದೀನ್ ಕೆ.ಎ.ಯು. ಸೇರಿದಂತೆ ಕುಟುಂಬದ ಸದಸ್ಯರು ಈ ವೇಳೆ ಉಪಸ್ಥಿತರಿದ್ದರು.