ಸ್ನೇಹ ಶಾಲೆಯಲ್ಲಿ ಶಾರದ ಪೂಜೆ ಹಾಗೂ ಪೋಷಕರ ಸಭೆ

0

ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಶಾರದಾ ಪೂಜಾ ಕಾರ್ಯಕ್ರಮವು ಅ.3ನೇ ಗುರುವಾರದಂದು ಜರಗಿತು. ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಜನೆಗಳನ್ನು ಹಾಡಿ ಶಾರದಾದೇವಿಯನ್ನು ಸ್ತುತಿಸಿದರು. ಪ್ರಸಾದ ವಿತರಣೆಯ ಬಳಿಕ ಪೋಷಕರ ಸಭೆಯು ನಡೆಯಿತು.


ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಶಾಲಾ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆಯವರು ಮಾತನಾಡಿ ಶೈಕ್ಷಣಿಕ ಪ್ರಗತಿಯನ್ನು ಸಾಧಿಸುವ ಬಗ್ಗೆ ಮಾರ್ಗದರ್ಶನ ನೀಡಿದರು. ಮುಖ್ಯ ಶಿಕ್ಷಕಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರು ಉಪಸ್ಥಿತರಿದ್ದರು.