ಸುಳ್ಯ ರಂಗಮಯೂರಿ ಕಲಾ ಶಾಲೆಯಲ್ಲಿ ಶಾರದಾ ಪೂಜೆ- ಭಜನಾ ಕಾರ್ಯಕ್ರಮ

0

ಸುಳ್ಯದ ಶ್ರೀ ಹರಿ ಕಾಂಪ್ಲೆಕ್ಸ್ ನಲ್ಲಿರುವ ಲೋಕೇಶ್ ಊರುಬೈಲು ರವರ ಸಂಚಾಲಕತ್ವದ ರಂಗಮಯೂರಿ ಕಲಾ ಶಾಲೆಯಲ್ಲಿ ನವರಾತ್ರಿ ಉತ್ಸವದ ಸಂದರ್ಭದಲ್ಲಿ ಶ್ರೀ ಶಾರದಾ ಪೂಜೆಯು ಅ.9 ರಂದು ನಡೆಯಿತು.

ಬೆಳಗ್ಗೆ ಸುಗಮ ಸಂಗೀತ ಶಿಕ್ಷಕಿ ಶ್ರೀಮತಿ ಸುಮನಾ ರಾವ್ ಪುತ್ತೂರು ದೀಪ ಪ್ರಜ್ವಲಿಸಿದರು. ಬಳಿಕ ಕಲಾ ಶಾಲೆ ಯ ವಿದ್ಯಾರ್ಥಿಗಳಿಂದ ಭಜನಾ ‌ಕಾರ್ಯಕ್ರಮವು ನಡೆಯಿತು. ಮಧ್ಯಾಹ್ನ ಮಹಾಮಂಗಳಾರತಿಯಾಗಿ ಪ್ರಸಾದ ವಿತರಣೆ ಮಾಡಲಾಯಿತು.


ಕಲಾ ಶಾಲೆಯ ಪೋಷಕ ಕಮಿಟಿಯ ಸದಸ್ಯರು ಸಹಕರಿಸಿದರು.