ಸಂಪಾಜೆಯಲ್ಲಿ ಎರಡು ಮನೆಗಳಲ್ಲಿ ಚಿನ್ನಾಭರಣ ಮತ್ತು ಹಣ ಕದ್ದ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆರೋಪ ಸಾಬೀತಾಗಿದ್ದು , ಪ್ರಕರಣದಲ್ಲಿ ಭಾಗಿಯಾದ ಇಬ್ಬರಿಗೂ ಸುಳ್ಯ ನ್ಯಾಯಾಲಯಲ್ಲಿ ಶಿಕ್ಷೆ ವಿಧಿಸಿರುವುದಾಗಿ ವರದಿಯಾಗಿದೆ.
ಪ್ರಕರಣದ ಆರೋಪಿಗಳಾದ ಅಹ್ಮದ್ ಕಬೀರ್ ಹಾಗೂ ಸಾಜುದೀನ್ ಫಾರೂಖ್ ಎಂಬವರಿಗೆ ಶಿಕ್ಷೆ ವಿಧಿಸಲಾಗಿದೆ.
ಪ್ರಕರಣದ ವಿವರ
ದಿನಾಂಕ 29.01.2014 ರಂದು ಸುಳ್ಯ ತಾಲೂಕು ಸಂಪಾಜೆ ಗ್ರಾಮದ ಪೆಲತ್ತಡ್ಕ ಎಂಬಲ್ಲಿರುವ ಸನತ್.ಪಿ.ಎಸ್. ಎಂಬವರ ಮನೆಯ ಹಿಂಬದಿಯಲ್ಲಿರುವ ಬಾಗಿಲನ್ನು ಮುರಿದು ಒಳಪ್ರವೇಶಿಸಿ, ಮನೆಯೊಳಗಡೆಯಲ್ಲಿ ಕಪಾಟಿನಲ್ಲಿರಿಸಿದ್ದ ಸುಮಾರು 62,900/- ಮೌಲ್ಯದ 3 ಗ್ರಾಂ ತೂಕದ ಉಂಗುರ-1 , 16 ಗ್ರಾಂ ತೂಕದ ಚಿನ್ನದ ಚೈನ್-1, 8 ಗ್ರಾಂ ತೂಕದ ಚಿನ್ನದ ಚೈನ್ -1 , ಹಾಗೂ ನಗದು 10,000 ರೂಪಾಯಿ ಕಳವು ಮಾಡಿಕೊಂಡು ಹೋಗಿರುವುದಾಗಿದೆ
ಮುಂದುವರಿದು ಅದೇ ದಿನ ಎರಡನೆಯದಾಗಿ, ಸುಳ್ಯ ತಾಲೂಕು ಸಂಪಾಜೆ ಗ್ರಾಮದ ಗೂನಡ್ಕ ಪೂಜಾರಿ ಮನೆ ಎಂಬಲ್ಲಿರುವ ಮಾಧವ.ಪಿ ಎಂಬವರ ಮನೆಯ ಹಿಂಬದಿಯಲ್ಲಿರುವ ಕಿಟಕಿಯ ಕಬ್ಬಿಣದ ರಾಡನ್ನು ಬಗ್ಗಿಸಿ ಮನೆಯೊಳಗಡೆ ಹೋಗಿ ಮನೆಯೊಳಗಡೆಯಲ್ಲಿ ಕಪಾಟಿನಲ್ಲಿರಿಸಿದ್ದ ಸುಮಾರು 2,27,600/- ಮೌಲ್ಯದ 5 ಗ್ರಾಂ ತೂಕದ ಚಿನ್ನದ ಮೂಗು ಬೊಟ್ಟು-3, 28 ಗ್ರಾಂ ತೂಕದ ಚಿನ್ನದ ಬಳೆ-2, 30 ಗ್ರಾಂ ಚಿನ್ನದ ಚೈನ್-1, 10 ಗ್ರಾಂ ತೂಕದ ಚಿನ್ನದ ಚೈನ್-1, 8 ಗ್ರಾಂ ತೂಕದ ಚಿನ್ನದ ಚೈನ್ – 1, ತಲಾ 4 ಗ್ರಾಂ ತೂಕದ ಚಿನ್ನದ ಉಂಗುರ- 2, ತಲಾ 6 ಗ್ರಾಂ ತೂಕದ ಚಿನ್ನದ ಕಿವಿ ಓಲೆ -2 ಜೊತೆ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ
ಈ ಎರಡು ಪ್ರಕರಣಗಳಲ್ಲಿ ಎರಡನೇ ಆರೋಪಿ ತಲೆಮರೆಸಿಕೊಂಡಿದ್ದರಿಂದ ಎರಡೂ ಪ್ರಕರಣಗಳನ್ನು ವಿಭಜಿಸಿ ನಂತರ ಆರೋಪಿ ಪತ್ತೆಯಾದಮೇಲೆ ಎಲ್ಲಾ ನಾಲ್ಕು ಪ್ರಕರಣಗಳನ್ನು ವಿಚಾರಣೆ ನಡೆಸಿದ ಸುಳ್ಯ ನ್ಯಾಯಾಲಯವು ಇಬ್ಬರೂ ಆರೋಪಿಗಳು ಮಾಡಿರುವ ಅಪರಾಧ ಸಾಬೀತಾಗಿದ್ದು ಇಬ್ಬರನ್ನೂ ದೋಷಿಯೆಂದು 08.10.2024 ರಂದು ಘೋಷಿಸಿ ಇಬ್ಬರೂ ಅಪರಾಧಿಗಳಿಗೆ ಕಲಂ 380 ರಡಿಯಲ್ಲಿ 3 ವರ್ಷಗಳ ಸಾದಾ ಕಾರಾಗೃಹವಾಸ ಮತ್ತು ₹10,000/- ದಂಡ, ದಂಡ ತೆರಲು ತಪ್ಪಿದಲ್ಲಿ 6 ತಿಂಗಳ ಸಾದಾ ಕಾರಾಗೃಹವಾಸ ಹಾಗೆಯೇ ಕಲಂ 454 ರ ಅಪರಾಧಕ್ಕೆ 3 ವರ್ಷಗಳ ಸಾದಾ ಕಾರಾಗೃಹವಾಸ ಮತ್ತು ₹10,000/- ದಂಡ, ದಂಡ ತೆರಲು ತಪ್ಪಿದಲ್ಲಿ 6 ತಿಂಗಳ ಸಾದಾ ಕಾರಾಗೃಹವಾಸ
ಶಿಕ್ಷೆ ವಿಧಿಸಿ, ಇಬ್ಬರೂ ಅಪರಾಧಿಗಳಿಗೆ ಎರಡೂ ಶಿಕ್ಷೆಗಳನ್ನು ಏಕಕಾಲಕ್ಕೆ ಅನುಭವಿಸುವಂತೆ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ. ಬಿ ಮೋಹನ್ ಬಾಬುರವರು ಆದೇಶ ಮಾಡಿರುತ್ತಾರೆ.
ಈ ಪ್ರಕರಣದಲ್ಲಿ ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕರು ನಡೆಸಿ ವಾದ ಮಂಡಿಸಿದ್ದಾರೆ.