ಇತಿಹಾಸ ಪ್ರಸಿದ್ಧ ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವು ಅ.03 ರಿಂದ ಪ್ರಾರಂಭಗೊಂಡಿದ್ದು ಅ.11 ರವರೆಗೆ ಭಕ್ತಿ,ಸಂಭ್ರಮದಿಂದ ನಡೆಯಲಿರುವುದು.
ಪ್ರತೀ ದಿನ ರಾತ್ರಿ ಗಂಟೆ 7.15 ರಿಂದ 8.15 ರವರೆಗೆ ಭಜನಾ ಕಾರ್ಯಕ್ರಮ ನಡೆಯುತ್ತಿದೆ.
ರಾತ್ರಿ ಗಂಟೆ 7.30 ಕ್ಕೆ ದುರ್ಗಾ ಪೂಜೆ ನಡೆಯುತ್ತಿದೆ.
ಬಳಿಕ ಶ್ರೀ ಪಂಚಲಿಂಗೇಶ್ವರ ದೇವರಿಗೆ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು.
ಅ.11 ರಂದು ಶುಕ್ರವಾರ ಆಯುಧ ಪೂಜೆ ನಡೆಯಿತು.
ಅ.12 ರಂದು ಶನಿವಾರ ವಿಜಯದಶಮಿಯಂದು ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡು ಶ್ರೀ ದೇವರ ಪ್ರಸಾದವನ್ನು ಸ್ವೀಕರಿಸಬೇಕೆಂದು ದೇವಸ್ಥಾನದ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.