ಅ.18 ರಿಂದ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ವತಿಯಿಂದ ಮೂರು ದಿನ ನಾಲ್ಕು ತರಬೇತಿ ಕಾರ್ಯಕ್ರಮ

0

ಸುಳ್ಯ, ಪುತ್ತೂರು,ಮಂಗಳೂರಿನಲ್ಲಿ ತರಬೇತಿ ಕಾರ್ಯಾಗಾರ

ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಇದರ ವತಿಯಿಂದ ಅ. 18 ,19‌ ಮತ್ತು 20 ರಂದು ಸುಳ್ಯ, ಪುತ್ತೂರು, ಮಂಗಳೂರಿನ ವಿವಿಧ ಕಾಲೇಜುಗಳಲ್ಲಿ ರಾಜ್ಯಮಟ್ಟದ ತರಬೇತಿ ಕಾರ್ಯಾಗಾರ ನಡೆಯಲಿದೆ.

ಅ.18 ರಂದು ಬೆಳಿಗ್ಗೆ ಸುಳ್ಯ ಸೈಂಟ್ ಜೊಸೆಫ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರಿಗೆ “ಗುಡ್ ಟು ಗ್ರೇಟ್” ತರಬೇತಿ ಕಾರ್ಯಕ್ರಮ. ಮಧ್ಯಾಹ್ನ 2:30 ರಿಂದ ಸಾಯಂಕಾಲ 6:00ರ ತನಕ ಈಶ್ವರಮಂಗಳದಲ್ಲಿರುವ ಮಧುರ ಇಂಟರ್ನ್ಯಾಷನಲ್ ಶಾಲಾ ಶಿಕ್ಷಕರಿಗೆ “ಗ್ರೇಟ್ ಟೀಚರ್ಸ್” ಕಾರ್ಯಗಾರ ನಡೆಯಲಿದೆ.

ಅ 19 ರಂದು ಬೆಳಿಗ್ಗೆ ಯಿಂದ ಸಂಜೆಯವರೆಗೆ ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ಸರಿ ಸುಮಾರು 200ರಷ್ಟು ಪದವಿ ವಿದ್ಯಾರ್ಥಿಗಳಿಗೆ “ಇಗ್ನೈಟ್ ಕೆರಿಯರ್” ಎಂಬ ವಿಷಯದಲ್ಲಿ ತರಬೇತಿ ಕಾರ್ಯಕ್ರಮ ನಡೆಯಲಿದೆ.

ಅ.20ರಂದು ಮಂಗಳೂರಿನ ಯೇನೋಪೋಯ ವಿಶ್ವವಿದ್ಯಾಲಯದ ಸುಮಾರು 100 ಎನ್ ಎಸ್ ಎಸ್ ವಿದ್ಯಾರ್ಥಿಗಳಿಗೆ ಜೀವನ ಕೌಶಲ್ಯ ಗಳು ಎಂಬ ವಿಷಯದಲ್ಲಿ ರಾಜ್ಯಮಟ್ಟದ ತರಭೇತಿ ಕಾರ್ಯಗಾರ ನಡೆಯಲಿದೆ.

ಈ ಕಾರ್ಯಕ್ರಮಗಳನ್ನು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಫಾರ್ಮೆಡ್ ಲಿಮಿಟೆಡ್ ನ ಮಾನವ ಸಂಪನ್ಮೂಲ ತರಬೇತಿ ಮತ್ತು ಆಡಳಿತ ಅಭಿವೃದ್ಧಿ ವಿಭಾಗದ ಹಿರಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷರು ಹಾಗೂ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ (ನೋಂ) ಅಧ್ಯಕ್ಷರಾದ ಡಾ. ಉಮ್ಮರ್ ಬೀಜದಕಟ್ಟೆ ಮತ್ತು ಫಾರ್ಮೆಡ್ ಲಿಮಿಟೆಡ್ ನ ತರಬೇತಿ ವಿಭಾಗದ ಸಹಾಯಕ ಉಪಾಧ್ಯಕ್ಷರು ಅಂತರರಾಷ್ಟ್ರೀಯ ತರಬೇತುದಾರ ವಿಕ್ರಂ ಸಾಗರ್ ಸಕ್ಸೇನಾ ರವರು ನಡೆಸಿಕೊಡಲಿದ್ದಾರೆ ಎಂದು ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ನಿರ್ದೇಶಕರಾದ ಸಲೀಂ ಪೆರುಂಗೋಡಿ ,ಷರೀಫ್ ಜಟ್ಟಿಪಳ್ಳ ರವರು ತಿಳಿಸಿದ್ದಾರೆ.