ಬಾಳುಗೋಡು ಬೆಟ್ಟುಮಕ್ಕಿ ಪೊಯ್ಕೆಗದ್ದೆ ಶ್ರೀ ದೇವಿಯ ಸನ್ನಿಧಿಯಲ್ಲಿ 39ನೇ ವರ್ಷದ ನವರಾತ್ರಿ ಪೂಜೆ ಸಂಪನ್ನ

0

ಬಾಳುಗೋಡು ಬೆಟ್ಟುಮಕ್ಕಿ ಪೊಯ್ಯೆಗದ್ದೆ ಶ್ರೀ ದೇವಿಯ ಸನ್ನಿಧಿಯಲ್ಲಿ 39ನೇ ವರ್ಷದ ನವರಾತ್ರಿ ಪೂಜೆ
ಅ.3 ರಿಂದ ಅ. 11 ರಂದು ನಡೆಯಿತು.

ಅ.3 ರ ಬೆಳಿಗ್ಗೆ ಗಣಹೋಮ, ಶ್ರೀ ದೇವಿಯ ಗದ್ದಿಗೆ ಏರುವುದರೊಂದಿಗೆ ನವರಾತ್ರಿ ಉತ್ಸವ ಆರಂಭವಾಗಿದ್ದು ಅಂದು, ನಾಗತಂಬಿಲ, ರಾತ್ರಿ ದೇವಿ ಪೂಜೆ ನಡೆಯಿತು. ಪ್ರತಿ ನಿತ್ಯ ಭಜನಾ ಕಾರ್ಯಕ್ರಮ, ಅನ್ನಸಂತರ್ಪಣೆ ನಡೆಯಿತು ಅ. 11ರಂದು ಬೆಳಿಗ್ಗೆ ತಡೆಕಾಯಿ ಕೊಡುವ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ದುರ್ಗಾಪೂಜೆ ನಡೆಯಿತು. ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.