ಅಜ್ಜಾವರ : ವರಮಹಾಲಕ್ಷ್ಮಿ ಪೂಜಾ ಸಮಿತಿ ಮಹಾಸಭೆ: ಅಧ್ಯಕ್ಷರಾಗಿ ವೇದಾವತಿ ಬಾಲಚಂದ್ರ ಆಯ್ಕೆ

0

ಅಜ್ಜಾವರ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಇದರ ವಾರ್ಷಿಕ ಮಹಾಸಭೆಯು ಅ.14 ರಂದು ಶಂಕರ ಭಾರತೀ ವೇದ ಪಾಠ ಶಾಲೆ ಬಯಂಬು ಅಜ್ಜಾವರದಲ್ಲಿ ನಡೆಯಿತು.
ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಹರಿಣಾಕ್ಷಿ ಎಸ್ ರೈ ಬೇಲ್ಯರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.


ಕಾರ್ಯದರ್ಶಿ ವಿಶಾಲ ಸೀತಾರಾಮ ಕರ್ಲಪ್ಪಾಡಿ ವರದಿ ವಾಚಿಸಿದರು. ಕೋಶಾಧಿಕಾರಿ ರಮ್ಯ ಭವಾನಿಶಂಕರ ಶಿರಾಜೆ ಲೆಕ್ಕಪತ್ರ ಮಂಡಿಸಿದರು.
ನೂತನ ಸಮಿತಿ : ೨೦೨೪ – ೨೫ನೇ ಸಾಲಿನ ನೂತನ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ವೇದಾವತಿ ಬಾಲಚಂದ್ರ ಅಡ್ಪಂಗಾಯ, ಉಪಾಧ್ಯಕ್ಷರಾಗಿ ವಿಮಲಾರುಣ ಪಡ್ಡಂಬೈಲು, ಕಾರ್ಯದರ್ಶಿಯಾಗಿ ಕವಿತಾ ಪುರುಷೋತ್ತಮ ನಾರ್ಕೋಡು, ಕೋಶಾಧಿಕಾರಿಯಾಗಿ ಸರಸ್ವತಿ ಚಂದ್ರಶೇಖರ ಬೇಲ್ಯ, ಜತೆ ಕಾರ್ಯದರ್ಶಿಯಾಗಿ ರಮ್ಯ ಶಿರಾಜೆ, ಭಜನಾ ಸಂಚಾಲಕರಾಗಿ ಜಯಂತಿ ಎನ್.ಜೆ. ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಹಿಷಮರ್ದಿನೀ ದೇವಳದ ಆಡಳಿತ ಮೊಕ್ತೇಸರರಾದ ಬಯಂಬು ಭಾಸ್ಕರ ರಾವ್, ಸಲಹಾ ಸಮಿತಿ ಸದಸ್ಯರಾದ ಸೀತಾರಾಮ ಶಾಂತಿಮಜಲು, ಬಾಲಚಂದ್ರ ಮುಡೂರು, ಲೋಕೇಶ್ ಅಡ್ಡಂತಡ್ಕ, ಪೂಜಾ ಸಮಿತಿ ಸ್ಥಾಪಕಾಧ್ಯಕ್ಷರಾದ ಜಯಂತಿ ಎನ್.ಜೆ., ಸಂಚಾಲಕರಾದ ಸೀತಾಲಕ್ಷ್ಮಿ ಕರ್ಲಪ್ಪಾಡಿ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ರಮ್ಯ ಶಿರಾಜೆ ಪ್ರಾರ್ಥಿಸಿದರು. ಕವಿತಾ ನಾರ್ಕೋಡು ಸ್ವಾಗತಿಸಿದರು. ಸರಸ್ವತಿ ಬೇಲ್ಯ ವಂದಿಸಿದರು. ಲಕ್ಷ್ಮಿ ಪಲ್ಲತಡ್ಕ ಕಾರ್ಯಕ್ರಮ ನಿರೂಪಿಸಿದರು.