ಬಳ್ಪ: ಅಕ್ಕೇಣಿ ಸುಂದರ ಗೌಡರ ಮನೆಯಿಂದ 12 ಲಕ್ಷ ನಗದು, 28 ಪವನ್ ಚಿನ್ನ ಕಳ್ಳತನ

0

ಬಳ್ಪ ಗ್ರಾಮದ ಅಕ್ಕೇಣಿ ಸುಂದರ ಗೌಡ ಎಂಬವರ ಮನೆಯಿಂದ ಸುಮಾರು ರೂ. 12 ಲಕ್ಷ ಮತ್ತು ಅಂದಾಜು 28 ಪವನ್ ಚಿನ್ನ ಕಳ್ಳತನವಾಗಿರುವ ಘಟನೆ ಅ. 20ರಂದು ಬೆಳಕಿಗೆ ಬಂದಿದೆ.
ಅಕ್ಕೇಣಿ ಸುಂದರ ಗೌಡರು ತಮ್ಮ ಕುಟುಂಬದೊಂದಿಗೆ ಅ. 17ರಂದು ಸಂಜೆ ಅಂದಾಜು 6 ಗಂಟೆ ಸುಮಾರಿಗೆ ಮನೆಗೆ ಬೀಗ ಹಾಕಿ ತಮ್ಮ ಮಗಳ ಮನೆ ಪೆರಿಗೇರಿಗೆ ಹೋಗಿದ್ದರು. ಇಂದು ಮಧ್ಯಾಹ್ನ ಮನೆಗೆ ಹಿಂತಿರುಗಿ ಬಂದಾಗ ಮನೆಯ ಎದುರು ಬಾಗಿಲಿನ ಬೀಗ ಮುರಿದಿರುವುದನ್ನು ಗಮನಿಸಿ ಮನೆಯೊಳಗೆ ನೋಡಿದಾಗ ರೂ. 12 ಲಕ್ಷ ಮತ್ತು 28 ಪವನ್ ಚಿನ್ನ ಕಾಣೆಯಾಗಿರುವುದು ತಿಳಿಯಿತು. ಕರಿಮಣಿ ಸರವೊಂದರ ತಾಳಿಯನ್ನು ಬಿಚ್ಚಿಟ್ಟಿರುವುದಾಗಿ ತಿಳಿದುಬಂದಿದೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೋಲೀಸರರು ತನಿಖೆ ನಡೆಸುತ್ತಿದ್ದಾರೆ.