ಎನ್.ಎಂ.ಸಿ ಸುಳ್ಯದ ಎನ್.ಎಸ್.ಎಸ್ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಶಿಬಿರದಲ್ಲಿ ಭಾಗಿ

0

ಚಿತ್ರಲೇಖ ಕೆ.ಎಸ್. ರಿಗೆ ಗೌರವ ಸನ್ಮಾನ

ಸುಳ್ಯ ನೆಹರು ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ನಾಯಕಿ ಹವ್ಯಶ್ರೀ ಕೆ.ಎಸ್ ದ್ವಿತೀಯ ಬಿ.ಕಾಂ. ಮತ್ತು ಕೌಶಿಕ್ ದ್ವಿತೀಯ ಬಿಸಿಎ ವಿದ್ಯಾರ್ಥಿಗಳು ಮಂಗಳೂರಿನ ಯನಪೊಯಾ ವಿಶ್ವವಿದ್ಯಾನಿಲಯ ಆಯೋಜಿಸಿದ ರಾಜ್ಯ ಮಟ್ಟದ ಎನ್.ಎಸ್.ಎಸ್ ಸ್ವಯಸೇವಕರ ನಾಯಕತ್ವ ಕೌಶಲ್ಯ ತರಬೇತಿ ಕಾರ್ಯಗಾರದಲ್ಲಿ ಅ. 20ರಂದು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿದ್ದ ಡಾ. ಅರುಣ್ ಎ. ಭಾಗ್ವತ್ ಮತ್ತು
ವಿಕ್ರಮ್ ಸಕ್ಸೆನ ತರಬೇತಿ ನೀಡಿದರು. ವಿದ್ಯಾರ್ಥಿಗಳು ಹೇಗೆ ನಾಯಕತ್ವ ಗುಣವನ್ನು ಹೊಂದಬೇಕು, ಗುರಿ ಸಾಧಿಸಲು ನಾವು ಏನು ಮಾಡಬೇಕು ಎಂಬುದನ್ನು ವಿವರಿಸಿ ಹಲವು ಚಟುವಟಿಕೆಗಳ ಮೂಲಕ ತರಬೇತಿ ಕಾರ್ಯಾಗಾರ ನಡೆಸಿಕೊಟ್ಟರು. ಮಂಗಳೂರು ವಿಶ್ವವಿದ್ಯಾನಿಲಯದಿಂದ 2022-2023 ಸಾಲಿನ “ಅತ್ಯುತ್ತಮ ರಾಷ್ಟೀಯ ಸೇವಾ ಯೋಜನ ಅಧಿಕಾರಿ ಪ್ರಶಸ್ತಿ” ಪಡಿದಿರುವ ಚಿತ್ರಲೇಖ ಕೆ.ಎಸ್ ಇವರಿಗೆ ಸಜ್ಜನ ಪ್ರತಿಷ್ಠಾನದ ಉಮ್ಮರ್ ಬಿಜ್ಜದಕಟ್ಟೆ ಕಾಲೇಜಿನ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಿದರು. ವೇದಿಕೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಎನ್.ಎಸ್.ಎಸ್ ಸಂಯೋಜನಾ ಅಧಿಕಾರಿ ಡಾ. ಶೇಷಪ್ಪ ಕೆ, ಯನಪೊಯಾದ ಎನ್.ಎಸ್.ಎಸ್ ಅಧಿಕಾರಿ ಅಬ್ದುಲ್ ರಶೀದ್ ಉಪಸ್ಥಿತರಿದ್ದರು.