ವ್ಯಸನಗಳ ಮೊದಲ ಮೆಟ್ಟಿಲು ಮದ್ಯಪಾನ : ಭವಾನಿ ಶಂಕರ ಅಡ್ತಲೆ
ವ್ಯಸನಗಳ ಮೊದಲ ಮೆಟ್ಟಿಲು ಮದ್ಯಪಾನ. ಮೊದಲ ಮೆಟ್ಟಿಲು ಜಾರಿದರೆ ಎಲ್ಲಾ ಮೆಟ್ಟಿಲುಗಳು ಜಾರಿದಂತೆ ಎಂದು ಧರ್ಮಸ್ಥಳ ಜನಜಾಗೃತಿ ವೇದಿಕೆಯ ನಿಕಟ ಪೂರ್ವಾಧ್ಯಕ್ಷ ಭವಾನಿ ಶಂಕರ ಅಡ್ತಲೆ ಹೇಳಿದರು.
ಅವರು ಅಡ್ತಲೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ಕೆವಿಜಿ ಪಾಲಿಟೆಕ್ನಿಕ್ ನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ವ್ಯಸನಗಳು ಚಟವಲ್ಲ ಅದೊಂದು ಕಾಯಿಲೆ. ಆ ನಿಟ್ಟಿನಲ್ಲಿ ಹದಿಹರೆಯವು ಅಪಾಯಕಾರಿ ಘಟ್ಟವಾಗಿದ್ದು, ಯುವಕರು ಜಾಗೃತರಾಗಬೇಕು ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ಕೆವಿಜಿ ಪಾಲಿಟೆಕ್ನಿಕ್ ನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ಮುಖ್ಯಸ್ಥೆ ರಮಾದೇವಿ ವಹಿಸಿದ್ದರು.
ವೇದಿಕೆಯಲ್ಲಿ ಕೆವಿಜಿ ಪಾಲಿಟೆಕ್ನಿಕ್ ನ ಉಪನ್ಯಾಸಕಿ ಬಿಂದು ಕೆ.ವಿ., ಮರ್ಕಂಜ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಸುನಿಲ್ ಅಡ್ತಲೆ, ಗೂನಡ್ಕ ಮಾರುತಿ ಸ್ಕೂಲ್ ನ ಶಿಕ್ಷಕಿ ವಾಣಿಶ್ರೀ, ಎನ್ನಸ್ಸೆಸ್ ಕಾರ್ಯಕ್ರಮಾಧಿಕಾರಿಗಳಾದ ಚಂದ್ರಶೇಖರ ಬಿಳಿನೆಲೆ , ಸುನಿಲ್ ಕುಮಾರ್ ಎನ್.ಪಿ ಮೊದಲಾದವರು ಉಪಸ್ಥಿತರಿದ್ದರು.