ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ಚುನಾವಣೆ

0

ಸಾಲಗಾರರ ಸಾಮಾನ್ಯ ಕ್ಷೇತ್ರ  ಸಹಕಾರಿ ಅಭಿವೃದ್ಧಿ ರಂಗದ ನಾಲ್ವರಿಗೆ ಗೆಲುವು

ಇಬ್ಬರಿಗೆ ಸಮಾನ ಮತ ಬಂದ ಹಿನ್ನೆಲೆ ಚೀಟಿ ಎತ್ತುವ ಮೂಲಕ ಜ್ಞಾನಶೀಲನ್ ಆಯ್ಕೆ

ಸಮನ್ವಯ ಸಹಕಾರಿ ಬಳಗದ ಗಣಪತಿ ಭಟ್ ಗೂನಡ್ಕ ಹಾಗೂ   ಸ್ವತಂತ್ರ ಅಭ್ಯರ್ಥಿ ಜಿ.ಕೆ. ಹಮೀದ್ ಗೆಲುವು

ಸೋಮಶೇಖರ ಕೊಯಿಂಗಾಜೆ ನೇತೃತ್ವದ ತಂಡಕ್ಕೆ ಮತ್ತೊಮ್ಮೆ ಅಧಿಕಾರ

ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ  ಆಡಳಿತ ಮಂಡಳಿಯ ಚುನಾವಣೆಯಲ್ಲಿ ಸಾಲಗಾರರ ಸಾಮಾನ್ಯ ಕ್ಷೇತ್ರದಲ್ಲಿ  ನಾಲ್ಕು  ಸ್ಥಾನಗಳಲ್ಲಿ ಸಹಕಾರಿಗಳ ಅಭಿವೃದ್ಧಿ ರಂಗದ ಅಭ್ಯರ್ಥಿಗಳು ಜಯಭೇರಿ ಸಾಧಿಸಿದ್ದಾರೆ. ಸಮನ್ವಯ ಸಹಕಾರಿ ಬಳಗದ ಗಣಪತಿ ಭಟ್ ಗೂನಡ್ಕ ಹಾಗೂ ಕಾಂಗ್ರೆಸ್ ಬಂಡಾಯ ಸ್ವತಂತ್ರ ಅಭ್ಯರ್ಥಿ ಜಿ.ಕೆ. ಹಮೀದ್ ಜಯಭೇರಿ ಸಾಧಿಸಿದ್ದಾರೆ.

ಸಹಕಾರಿ ಅಭಿವೃದ್ಧಿ ರಂಗದ ಅಭ್ಯರ್ಥಿಗಳಾದ ಸಂಜೀವ ಪೂಜಾರಿ 264 ಮತ ಹಾಗೂ ಜ್ಞಾನಶೀಲನ್ ಅವರಿಗೆ ತಲಾ 264 ಮತ ಪಡೆದುಕೊಂಡರು.
ಈ ಹಿನ್ನೆಲೆಯಲ್ಲಿ ಚೀಟಿ ಎತ್ತುವ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆದಾಗ ಜ್ಞಾನಶೀಲನ್ ಅವರು ಆಯ್ಕೆಗೊಂಡರು.
ಏಳನೇ ಸ್ಥಾನದಲ್ಲಿ ಎಸ್.ಪಿ. ಲೋಕನಾಥ್ ಹಾಗೂ ಶ್ರೀಧರ ದುಗ್ಗಳ ಅವರಿಗೆ ತಲಾ 263 ಬಂದ ಕಾರಣ ಅವರಿಬ್ಬರು  ಮರು ಮತ ಎಣಿಕೆ ಆಗಬೇಕೆಂದು ಹೇಳಿದರೂ ಚುನಾವಣಾ ಅಧಿಕಾರಿ ಇದಕ್ಕೆ ಒಪ್ಪಲಿಲ್ಲ‌. ಈ ಹಿನ್ನೆಲೆಯಲ್ಲಿ ಅವರಿಬ್ಬರು ಅಸಮಾಧಾನಗೊಂಡು ಹೊರನಡೆದರು.

ಸಹಕಾರಿಗಳ ಅಭಿವೃದ್ಧಿ ರಂಗದ ಅಭ್ಯರ್ಥಿಗಳಾದ ಸೋಮಶೇಖರ ಕೊಯಿಂಗಾಜೆ  510,  ಮಹಮ್ಮದ್ ಕುಂಞಿ ಗೂನಡ್ಕ 394 , ಕೆ.ಪಿ. ಜಾನಿ ಕಲ್ಲುಗುಂಡಿ 332,  ಜ್ಞಾನಶೀಲನ್ 264 , ಸಮನ್ವಯ ಸಹಕಾರಿ ಬಳಗದ ಗಣಪತಿ ಭಟ್ ಗೂನಡ್ಕ 280 ಹಾಗೂ  ಸ್ವತಂತ್ರ ಅಭ್ಯರ್ಥಿ ಜಿ.ಕೆ. ಹಮೀದ್ 279 ಮತ ಪಡೆದರು.

ಈ ಕ್ಷೇತ್ರದಿಂದ ಸಮನ್ವಯ ಸಹಕಾರಿ ಬಳಗದ ಅಭ್ಯರ್ಥಿಗಳಾದ ಆನಂದ ಪಿ.ಎಲ್ 242 ,  ಎಸ್.ಪಿ. ಲೋಕನಾಥ 263, ಶ್ರೀಧರ 263,  ಮನೀಶ್ ಗೂನಡ್ಕ 204 ಮತ ಪಡೆದು ಪರಾಭವಗೊಂಡರು.

ಈ ಮೂಲಕ ಸೋಮಶೇಖರ ಕೊಯಿಂಗಾಜೆ ನೇತೃತ್ವದ ಸಹಕಾರಿಗಳ ಅಭಿವೃದ್ಧಿ ರಂಗವು 10  ಸ್ಥಾನಗಳನ್ನು ಪಡೆದು ಸಹಕಾರಿ ಸಂಘದ ಆಡಳಿತ ಚುಕ್ಕಾಣಿ ಹಿಡಿದುಕೊಂಡಿದೆ