ಬಾಳಿಲ ಗ್ರಾಮದ ಗುರಿಕ್ಕಾನ ದಿ. ನಾರಾಯಣ ರೈಯವರ ಪತ್ನಿ ಶ್ರೀಮತಿ ಸರಸ್ವತಿ ರೈಯವರು ಡಿ. 18ರಂದು ನಿಧನರಾದರು. ಇವರಿಗೆ 78 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಮಂಜುನಾಥ ರೈ, ರವೀಂದ್ರ ರೈ, ಪುತ್ರಿಯರಾದ ಶ್ರೀಮತಿ ಪುಷ್ಪಾ ರೈ, ಶ್ರೀಮತಿ ಪ್ರೇಮ ರೈ ಸೇರಿದಂತೆ ಮೊಮ್ಮಕ್ಕಳು, ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.