ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ಚುನಾವಣೆ

0

ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಲ್ಲಿ ಸಮನ್ವಯ ಸಹಕಾರಿ ಬಳಗದ ಜಿ.ವಿ. ಜಗದೀಶ್ ದೊಡ್ಡಡ್ಕ ಗೆಲುವು

ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಸಮನ್ವಯ ಸಹಕಾರಿ ಬಳಗದ ಅಭ್ಯರ್ಥಿ ಜಿ.ವಿ. ಜಗದೀಶ್ ದೊಡ್ಡಡ್ಕ ಅವರು 338 ಮತ ಪಡೆದು ಗೆಲುವು ಸಾಧಿಸಿದ್ದಾರೆ.
ಈ ಕ್ಷೇತ್ರದಿಂದ ಸಹಕಾರಿಗಳ ಅಭಿವೃದ್ಧಿ ರಂಗದ ಅಭ್ಯರ್ಥಿಯಾಗಿ ಕಣದಲ್ಲಿದ್ದ ಸುಶೀಲ ಬಾಲಕೃಷ್ಣ 326 ಮತ ಪಡೆದು ಪರಾಭವಗೊಂಡರು.