ಸಾಮಾನ್ಯ ಮಹಿಳಾ ಕ್ಷೇತ್ರದ ಎರಡೂ ಸ್ಥಾನದಲ್ಲಿ ಸಹಕಾರಿ ಅಭಿವೃದ್ಧಿ ರಂಗಕ್ಕೆ ಗೆಲುವು
ಬಂಡಾಯ ಅಭ್ಯರ್ಥಿ ಶ್ರೀಮತಿ ಸುಮತಿ ಶಕ್ತಿವೇಲು ಪರಾಭವ
ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ಸಾಮಾನ್ಯ ಮಹಿಳಾ ಕ್ಣೇತ್ರದ ಎರಡೂ ಸ್ಥಾನಗಳಲ್ಲಿ ಸಹಕಾರಿಗಳ ಅಭಿವೃದ್ಧಿ ರಂಗದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಸಹಕಾರಿಗಳ ಅಭಿವೃದ್ಧಿ ರಂಗದ ಅಭ್ಯರ್ಥಿಗಳಾದ ಯಮುನ ಬಿ.ಎಸ್. 328 ಹಾಗೂ ಪ್ರಮೀಳ 319 ಮತ ಪಡೆದು ವಿಜೇತರಾಗಿದ್ದಾರೆ.
ಈ ಕ್ಷೇತ್ರದಿಂದ ಸಮನ್ವಯ ಸಹಕಾರಿ ಬಳಗದ ಅಭ್ಯರ್ಥಿಯಾಗಿ ಕಣದಲ್ಲಿದ್ದ ಅನನ್ಯ 216, ರೀನಾ 190 ಮತ ಪಡೆದು ಪರಾಭವಗೊಂಡರು.
ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿದ್ದ ಸಂಪಾಜೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಸುಮತಿ ಶಕ್ತಿವೇಲು ಅವರು 208 ಮತ ಪಡೆದು ಪರಾಭವಗೊಂಡರು.