ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವಾರ್ಷಿಕೋತ್ಸವ ಡಿ. 21ರಂದು ನಡೆಯಿತು. ಅತಿಥಿಗಳಾಗಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ನ ಪ್ರಧಾನ ಕಾರ್ಯದರ್ಶಿ ಆರ್ಕಿಟೆಕ್ಟ್ ಅಕ್ಷಯ್ ಕೆ.ಸಿ ಹಾಗೂ ಕಾಲೇಜಿನ ಹಳೆಯ ವಿದ್ಯಾರ್ಥಿ ಮತ್ತು ಈಜಿ ಆಯುರ್ವೇದ ಹಾಸ್ಪಿಟಲ್ ಮಂಗಳೂರು ಇದರ ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ರವಿಗಣೇಶ್ ಮೊಗ್ರ ಭಾಗವಹಿಸಿದ್ದರು. ವೇದಿಕೆಯಲ್ಲಿ ಎ.ಒ.ಎಲ್.ಇ ಕಾರ್ಯದರ್ಶಿ ಹೇಮನಾಥ ಕೆ.ವಿ, ಕೌನ್ಸಿಲ್ ಮೆಂಬರ್ ಜಗದೀಶ್ ಅಡ್ತಲೆ, ಅಡ್ವೈಸರ್ ಪ್ರೊ. ದಾಮೋದರ ಗೌಡ, ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ ವಿ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ. ಹರ್ಷಿತಾ ಎಂ, ಕಾಲೇಜಿನ ಶೈಕ್ಷಣಿಕ ಅಧಿಕಾರಿ ಡಾ. ಕವಿತಾ ಬಿ.ಎಂ, ವಿದ್ಯಾರ್ಥಿ ಸಂಘದ ನಾಯಕ ಶೀತಲ್ ಗೌಡ, ಮಹಿಳಾ ಪ್ರತಿನಿಧಿ ನಿತ್ಯಾದಾಸ್, ಸ್ನಾತಕೋತ್ತರ ವಿಭಾಗದ ಪ್ರತಿನಿಧಿ ಡಾ. ಅನುಷಾ ಎಂ, ಕಾರ್ಯದರ್ಶಿ ಕು. ಲಕ್ಷ್ಮೀ ಸುರೇಶ್, ಕಲಿಕಾ ವೈದ್ಯರುಗಳ ಪ್ರತಿನಿಧಿಗಳಾದ ಡಾ. ಆರ್ಥಿಕ ಕೆ.ಎಸ್ ಹಾಗೂ ಡಾ. ಸ್ನೇಹ ಕೆ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ.ವಿ ಕಾಲೇಜಿನ ವಾರ್ಷಿಕ ವರದಿ ವಾಚಿಸಿದರು.
ಮುಖ್ಯ ಅತಿಥಿಯಾದ ಆರ್ಕಿಟೆಕ್ಟ್ ಅಕ್ಷಯ್ ಕೆ.ಸಿ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿ, ಉತ್ತಮ ವೈದ್ಯರಾಗಲು ಸಮಯ ಪ್ರಜ್ಞೆ ಹಾಗೂ ಶ್ರದ್ಧೆ ಅತ್ಯಮೂಲ್ಯ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಇನ್ನೋರ್ವ ಮುಖ್ಯ ಅತಿಥಿ ಡಾ. ರವಿಗಣೇಶ್ ಮೊಗ್ರ ಮಾತನಾಡಿ ಆಯುರ್ವೇದವು ದೇಶದಲ್ಲಿ ಮಾತ್ರ ಸೀಮಿತವಾಗದೆ ವಿದೇಶದಲ್ಲಿಯೂ ಪ್ರಾಮುಖ್ಯತೆಯ ಅರಿವು ಮೂಡಲಿ ಎಂದರು.
ಈ ಸಂದರ್ಭದಲ್ಲಿ ಕಾಲೇಜಿನಲ್ಲಿ 25 ವರ್ಷಕ್ಕಿಂತ ಅಧಿಕ ಸೇವೆ ಸಲ್ಲಿಸಿದ ಪ್ರಸೂತಿ ತಂತ್ರ ಹಾಗು ಸ್ತ್ರೀ ರೋಗ ವಿಭಾಗದ ಮುಖ್ಯಸ್ಥರಾದ ಪ್ರೊ. ಡಾ. ಅಶೋಕ್ ಕೆ, ಕಾಯಚಿಕಿತ್ಸ ವಿಭಾಗದ ಪ್ರೊ. ಡಾ. ಕೃಷ್ಣಪ್ರಕಾಶ್ ಎಂ.ಕೆ ಹಾಗೂ ಕಾಲೇಜಿನ ಕಚೇರಿ ಅಧೀಕ್ಷಕರಾದ ಚಂದ್ರಕುಮಾರ್ ಕೆ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಜೊತೆಗೆ ಶೈಕ್ಷಣಿಕ ಹಾಗು ಸಹ ಪಠ್ಯದಲ್ಲಿ ಉತ್ತಮ ಫಲಿತಾಂಶ ಸಾಧಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಕಾಲೇಜಿನ ವಿದ್ಯಾರ್ಥಿ ಸಂಘದ ನಾಯಕ ಶೀತಲ್ ಗೌಡ ಸ್ವಾಗತಿಸಿ, ಕು. ನೀಲಿಮ ಹಾಗು ಬಳಗ ಆಶಯ ಗೀತೆಯನ್ನು ಹಾಡಿದರು, ಕು. ಅಶ್ವಿನಿ ಭಟ್ ಹಾಗು ಕು. ಚಿತ್ಕಾಲ ಭಾರದ್ವಾಜ್ ಪ್ರಾರ್ಥಿಸಿದರು. ಸ್ನಾತಕೋತ್ತರ ವಿಭಾಗದ ಪ್ರತಿನಿಧಿಯಾದ ಡಾ. ಅನುಷಾ ಎಂ ವಂದಿಸಿದರು.
ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಕು. ಯಶಸ್ವಿನಿ ಹಾಗು ಧ್ಯಾನ್ ವಿಜಯ್ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಶೃತಿ ಗಾಯನ ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.