ಅ.28:ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ವಿಶೇಷ ಕೃಷಿ ಮಾಹಿತಿ ಸಂವಾದ ಕಾರ್ಯಾಗಾರ

0

ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ವಿಶೇಷ ಕೃಷಿ ಮಾಹಿತಿ ಸಂವಾದ ಕಾರ್ಯಾಗಾರ ಅ.28ರಂದು ಪೂ.9.30ರಿಂದ ಸಂಘದ ಅಮೃತ ಸಹಕಾರ ಸದನದಲ್ಲಿ ನಡೆಯಲಿದೆ. ಅಡಿಕೆ ಹಳದಿ ರೋಗ ಹಾಗೂ ಎಲೆಚುಕ್ಕಿ ರೋಗಗಳಿಂದಾಗಿ ಆತಂಕಕ್ಕೊಳಗಾಗಿರುವ ಅಡಿಕೆ ಬೆಳೆಗಾರ ಕೃಷಿಕರಿಗಾಗಿ ಆಧುನಿಕಪದ್ದತಿಯಲ್ಲಿ ಕಾಳುಮೆಣಸು ಕೃಷಿ ಹಾಗೂ ಅಡಿಕೆ ಬೆಳೆಯ ರೋಗಗಳು ಮತ್ತು ನಿರ್ವಹಣೆ ಬಗ್ಗೆ ಮಾಹಿತಿ ಕಾರ್ಯಾಗಾರ ಹಾಗೂ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ.ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ರಾಮಕೃಷ್ಣ ರೈ ಪೇರಾಲುಗುತ್ತು ಅಧ್ಯಕ್ಷತೆ ವಹಿಸುವರು. ಪ್ರಗತಿಪರ ಕಾಳು ಮೆಣಸು ಕೃಷಿಕರಾದ ಸುರೇಶ್ ಬಲ್ನಾಡ್ ಅವರು ಆಧುನಿಕ ಪದ್ಧತಿಯಲ್ಲಿ ಕಾಳುಮೆಣಸು ಹಾಗೂ ಸಮಗ್ರ ಕೃಷಿ ಎಂಬ ವಿಚಾರದಲ್ಲಿ ಮಾಹಿತಿ ನೀಡುವರು.ವಿಟ್ಲ ಸಿಪಿಸಿಆರ್‌ಐಯ ವಿಜ್ಞಾನಿ ಡಾ.ನಾಗರಾಜ್ ಎಸ್.ಆರ್ ಅವರು ಅಡಿಕೆ ಬೆಳೆ, ರೋಗಗಳು ಹಾಗೂ ನಿರ್ವಹಣೆ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.