ಕೊಡಿಯಾಲಬೈಲು ಮಲ್ನಾಡ್ ಶಾಲೆಯಲ್ಲಿ ಕಾನೂನು ಅರಿವು ಕಾರ್ಯಕ್ರಮ

0

ಅತಿಯಾದ ಮೊಬೈಲ್ ಬಳಕೆಯಿಂದ ವಿದ್ಯಾರ್ಥಿಗಳು ದೂರವಿರಬೇಕು :ನ್ಯಾಯಾಧೀಶ ಮೋಹನ್‌ಬಾಬು

ಸುಳ್ಯ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಇನ್ನರ್ ವೀಲ್ ಕ್ಲಬ್, ಕೊಡಿಯಾಲಬೈಲು ಮಲ್ನಾಡ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಇದರ ಸಂಯುಕ್ತಾಶ್ರಯದಲ್ಲಿ ಅ. ೨೫ ರಂದು ಪೋಕ್ಸೋ ಮತ್ತು ಮೋಟಾರು ವಾಹನ ಕಾಯ್ದೆಯ ಕುರಿತು ಕಾನೂನು ಅರಿವು ಕಾರ್ಯಕ್ರಮ ಮಲ್ನಾಡ್ ಶಾಲಾ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸುಳ್ಯ ಜೆ ಎಂ ಸಿ ನ್ಯಾಯಾಲಯದ ಹಿರಿಯ ನ್ಯಾಯಧೀಶ ಬಿ. ಮೋಹನ್ ಬಾಬು ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ಬಳಕೆ ಬಹಳ ಹೆಚ್ಚಾಗಿ ಕಂಡು ಬರುತ್ತಿದೆ. ಇದು ಎಷ್ಟು ಪ್ರಯೋಜನಕಾರಿಯೋ ಅಷ್ಟೇ ಕೇಡು ಕೂಡ ಆಗಿದೆ. ವಿದ್ಯಾರ್ಥಿಗಳು ಅತಿಯಾದ ಮೊಬೈಲ್ ಬಳಕೆಯಿಂದ ದೂರ ವಿರಬೇಕು.


ರಸ್ತೆಯಲ್ಲಿ ತಮ್ಮ ತಮ್ಮ ವಾಹನಗಳಲ್ಲಿ ಚಲಿಸುವಾಗ ಮೋಟಾರು ವಾಹನ ಸಂಚಾರಿ ನಿಯಮವನ್ನು ಪಾಲಿಸಬೇಕು. ಮತ್ತು ಮೋಟಾರು ಕಾಯ್ದೆಯ ಬಗ್ಗೆ ಪೂರ್ಣ ಮಾಹಿತಿ ಅರಿತಿರಬೇಕು ಎಂದು ಕಾಯ್ದೆ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷೆ ರೊ. ಎಂ ಯೋಗಿತಾ ಗೋಪಿನಾಥ ವಹಿಸಿದ್ದರು.


ವೇದಿಕೆಯಲ್ಲಿ ಸುಳ್ಯ ವಕೀಲರ ಸಂಘದ ಉಪಾಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು,ಸಹಾಯಕ ಸರಕಾರಿ ಅಭಿಯೋಜಕ ರಮೇಶ್ ಅರ್,ಸುಳ್ಯ ಇನ್ನರ್ ವೀಲ್ ಅಧ್ಯಕ್ಷೆ ಶ್ರೀಮತಿ ಚಿಂತನಾ ಸುಬ್ರಹ್ಮಣ್ಯ,ಗೌಡ ಸೋಶಿಯಲ್ ಎಜುಕೇಷನ್ ಪೌಡೇಶನ್ ಅಧ್ಯಕ್ಷ ಪಿ ಎಸ್ ಗಂಗಾಧರ್,ಶಾಲಾ ಸಂಚಾಲಕ ದೊಡಣ್ಣ ಬರಮೇಲು,ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವಿಜಯಲಕ್ಷ್ಮಿ ಮೊದಲಾದವರು ಉಪಸ್ಥಿತರಿದ್ದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ನ್ಯಾಯವಾಧಿ ಪಿ ಭಾಸ್ಕರ್ ರಾವ್ ಪೋಸ್ಕೊ ಹಾಗೂ ಮೋಟಾರು ವಾಹನ ಕಾಯ್ದೆ ಬಗ್ಗೆ ವಿದ್ಯಾರ್ಥಿಗಳಿಗೆ ವಿವರವಾಗಿ ಮಾಹಿತಿ ನೀಡಿದರು.

ಶಿಕ್ಷಕರುಗಳಾದ ವಿಜಯ ಲಕ್ಷ್ಮಿ ಸ್ವಾಗತಿಸಿ ರೇಷ್ಮ ವಂದಿಸಿ ಚಿತ್ರಲೇಖ ಕಾರ್ಯಕ್ರಮ ನಿರೂಪಿಸಿದರು.