ಸುಳ್ಯದ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ ಆಯುಷ್ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಇದರ ಸಹಯೋಗದೊಂದಿಗೆ 45 ವರ್ಷ ಮೇಲ್ಪಟ್ಟ ಮಹಿಳೆಯರ ಯೋಗಕ್ಷೇಮದಲ್ಲಿ ಆಯುರ್ವೇದದ ಪಾತ್ರ ಎಂಬ ವಿಷಯದ ಬಗ್ಗೆ ಮಾಹಿತಿ ಕಾರ್ಯಗಾರ ಕಾಲೇಜಿನ ಆಡಿಟೋರಿಯಂನಲ್ಲಿ ಅ. 25ರಂದು ನಡೆಯಿತು. ಕಾರ್ಯಗಾರವನ್ನು ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಸೂತಿ ತಂತ್ರ ಹಾಗೂ ಸ್ತ್ರೀರೋಗ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ಡಾ. ಅಶೋಕ್ ಕೆ ನಡೆಸಿಕೊಟ್ಟರು.
ಕಾರ್ಯಗಾರದಲ್ಲಿ ಕೆವಿಜಿ ಕಾನೂನು ಮಹಾವಿದ್ಯಾಲಯ ಸುಳ್ಯ, ನೆಹರು ಮೆಮೋರಿಯಲ್ ಕಾಲೇಜ್ ಸುಳ್ಯ ಇದರ ಸಿಬ್ಬಂದಿ ವರ್ಗದವರು, ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ಎನ್ಎಸ್ಎಸ್ ಯೋಜನಾಧಿಕಾರಿ ಡಾ. ಪ್ರಮೋದ್ ಪಿ ಎ, ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು, ಸ್ನಾತಕೋತರ ವಿದ್ಯಾರ್ಥಿಗಳು, ಕಲಿಕಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಾದ ಕುಮಾರಿ ಚಿತ್ಕಲ ಭಾರದ್ವಾಜ್ ಹಾಗೂ ಕುಮಾರಿ ಅಶ್ವಿನಿ ಪ್ರಾರ್ಥಿಸಿದರು.
ಕುಮಾರಿ ಎಸ್ ಅಶ್ವಿನಿ ಹಾಗೂ ಕುಮಾರಿ ಲಕ್ಷ್ಮಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು.