ಕಾನೂನು ತಜ್ಞರ ಸಮಿತಿ – ಗ್ರಾಮ ಮಟ್ಟದಲ್ಲಿ ರೈತ ಸಮಿತಿ ರಚಿಸಿ ಹೋರಾಟಕ್ಕೆ ನಿರ್ಧಾರ
ಕಸ್ತೂರಿರಂಗನ್ ಸೇರಿದಂತೆ ಪಶ್ಚಿಮ ಘಟ್ಟಗಳ ಜ್ವಲಂತ ಸಮಸ್ಯೆ ಹಾಗೂ ಪರಿಹಾರಗಳ ಸಮಾಲೋಚನಾ ಸಭೆಯು ಅ.೨೬ರಮದು ಸುಳ್ಯದ ಎ.ಪಿ.ಎಂ.ಸಿ. ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಸುಧೀರ್ಘ ಚರ್ಚೆ ನಡೆದು ಕಾನೂನು ಅರಿವು ನೀಡುವ ಕುರಿತು ಕಾನೂನು ತಜ್ಞರ ಸಮಿತಿ ರಚಿಸುವುದು ಹಾಗೂ ಹೋರಾಟಕ್ಕೆ ಗ್ರಾಮ ಮಟ್ಟದಲ್ಲಿ ಸಮಿತಿ ರಚಿಸಿ ಮುಂದೆ ಹೋಗಲು ಸಭೆಯಲ್ಲಿ ನಿರ್ಣಯಕೈಗೊಳ್ಳಲಾಯಿತು.
ಸಾಮಾಜಿಕ ಧುರೀಣರಾದ ಜಾಕೆ ಮಾಧವ ಗೌಡರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಮಲೆನಾಡು ಜಂಟಿ ಕ್ರಿಯಾ ಸಮಿತಿ ಸಂಚಾಲಕ ಪ್ರದೀಪ್ ಕೆ.ಎಲ್. ಪಶ್ಚಿಮ ಘಟ್ಟಗಳ ಜ್ವಲಂತ ಸಮಸ್ಯೆಗಳ ಕುರಿತು ಸಭೆಯಲ್ಲಿ ಪ್ರಸ್ತಾಪಿಸಿದರು. ಕೊಲ್ಲಮೊಗರು – ಕಲ್ಮಕಾರು ರೈತ ಹಿತ ರಕ್ಷಣಾ ವೇದಿಕೆಯ ರೈತ ಹಿತಾ ರಕ್ಷಣಾ ವೇದಿಕೆ ಅಧ್ಯಕ್ಷ ಹಮೀದ್ ಇಡ್ನೂರು ಸಭೆಯ ಉzಶ ವಿವರಿಸಿದರು. ಸುಳ್ಯ ರೈತ ಸಂಘದ ಅಧ್ಯಕ್ಷ ಲೋಲಜಾಕ್ಷ ಭೂತಕಲ್ಲು, ಹಿರಿಯರಾದ ಗದಾಧರ ಮಲ್ಲಾರ ವೇದಿಕೆಯಲ್ಲಿದ್ದರು.
ಸಭೆಯಲ್ಲಿ ಕಸ್ತೂರಿರಂಗನ್, ಮಾಧವ ಗಾಡ್ಗಿಲ್, ಪರಿಸರ ಸೂಕ್ಷ್ಮ ವಲಯ ಹೀಗೆ ಪಶ್ಚಿಮ ಘಟ್ಟಗಳ ಸಮಸ್ಯೆ ಕುರಿತು ವಿಸ್ತೃತವಾದ ಸಭೆ ನಡೆದು ಜನಪ್ರತಿನಿಧಿಗಳಿಗೆ ಹಾಗೂ ಪ್ರತೀ ಗ್ರಾಮಗಳ ಮನೆಗಳವರಿಗೆ ಈ ಸಮಸ್ಯೆUಳ ಕುರಿತು ಕಾನೂನು ಅರಿವು ಮೂಡಿಸುವ ನಿಟ್ಟಿನಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಬಳಿಕ ಕಾನೂನು ತಜ್ಞರ ಸಮಿತಿ ರಚನೆ ಹಾಗೂ ಗ್ರಾಮ ಗ್ರಾಮದಲ್ಲಿ ಸಮಿತಿ ರಚನೆ ಮಾಡುವ ಕುರಿತು ಸಭೆಯಲ್ಲಿ ನಿರ್ಣಯಕೈಗೊಳ್ಳಲಾಯಿತಲ್ಲದೇ, ಪಕ್ಷಾತೀತವಾಗಿ ಹೋರಾಟಕ್ಕೆ ಸಭೆ ಸಹಮತ ನೀಡಿತು.
ಸಭೆಯಲ್ಲಿ ಬಾಲ ಸುಬ್ರಹ್ಮಣ್ಯ ಎನ್.ಜಿ., ಚಂದ್ರಶೇಖರ ಕೋನಡ್ಕ, ಶಿವರಾಮ ಭಟ್ ಶಿವಾಲ, ಎಂ.ಡಿ.ವಿಜಯಕುಮಾರ್, ಮಾಧವ ಗೌಡ ಸುಳ್ಯಕೋಡಿ, ಉಳುವಾರು ತೀರ್ಥರಾಮ ಪರ್ನೋಜಿ, ಡಾ| ವಿಶುಕುಮಾರ್ ಬೇರಿಯ, ದಿನೇಶ್ ಮಡಪ್ಪಾಡಿ, ವಿನೂಪ್ ಮಲ್ಲಾರ ಹರಿಹರಪಲ್ಲತಡ್ಕ, ಶೇಖರಪ್ಪ ಕೊಲ್ಲಮೊಗ್ರು, ಬೆಳ್ಯಪ್ಪ ಖಂಡಿಗೆ, ಕುಳ ಪುಟ್ಟಣ್ಣ ಗೌಡ, ಮಹೇಶ್ ಬೆಳ್ಳಾರ್‌ಕರ್, ದಯಾನಂದ ಕಟ್ಟೆಮನೆ, ವಸಂತ ಗೌಡ ಕಿರಿಭಾಗ, ಯಶೋಧರ ಬಿ.ಸಿ., ಕೆ.ಪಿ. ಜಾನಿ ಕಲ್ಲುಗುಂಡಿ, ವಸಂತ ಪೆಲ್ತಡ್ಕ, ನಾರಾಯಣ ಗೌಡ ಶಿರೂರು ಮನೆ, ಲಕ್ಷ್ಮೀಶ ಕೆ ಶಿರೂರು ಮನೆ, ಪ್ರತಾಪ ಕೆ.ಎಹೆಚ್ ತಂಬಿನಡ್ಕ, ಕೆ.ಎಸ್. ರಾಮಚಂದ್ರ ಶಿವಾಲ, ಜಗದೀಶ ಕೆ.ವಿ. ಸಂಪಾಜೆ, ಚೆನ್ನಕೇಶವ ಕೆ ಚೊಕ್ಕಾಡಿ, ಪ್ರವೀಣ್ ಮುಂಡೋಡಿ ದೇವಚಳ್ಳ, ದಿವಾಕರ ಪೈ ಮಜಿಗುಂಡಿ, ಎ.ಕೆ. ಹಿಮಕರ, ಹೇಮಂತ್ ದೋಲನಮನೆ, ಕೆ.ಸಿ. ಹರೀಶ್ ಪೆರಾಜೆ, ಧನುಷ್ ಕುಕ್ಕೆಟ್ಟಿ, ಚೇತನ್ ಕಜೆಗದ್ದೆ, ಸುನೀಲ್ ಗೋಲ್ಯಾಡಿ, ರಾಜೇಶ್ ಕಿರಿಭಾಗ, ಸುಧೀರ್ ಏನೆಕಲ್ಲು, ಭವಾನಿಶಂಕರ ಕಲ್ಮಡ್ಕ ಸಭೆಯಲ್ಲಿ ಭಾಗವಹಿಸಿದ್ದರು.