ವಾಹನಗಳ ಒಂದೋಂದೇ ಪಾಟ್ಸ್೯ ನುಂಗುತ್ತಿರುವ ರಸ್ತೆಯ ಹೊಂಡಗಳು
ಹೊಂಡ ದಲ್ಲಿ ತೆಂಗಿನ ಸಸಿ ನೆಟ್ಟು ಪ್ರತಿಭಟನೆ
ದೊಡ್ಡತೋಟದಿಂದ ಮರ್ಕಂಜಕ್ಕೆ ತೆರಲುವ ರಸ್ತೆ ತೀರಾ ಹದಗೆಟ್ಟಿದ್ದು ಸಂಚಾರಿಸುವುದೇ ಸಾಧ್ಯವಿಲ್ಲದಂತಾಗಿದೆ.
ದೊಡ್ಡತೋಟ ದಿಂದ ಮರ್ಕಂಜ ಕ್ಕೆ ಹೋಗುವ ರಸ್ತೆಯ ಹೈದಂಗೂರು ವರೆಗೆ ರಸ್ತೆ ಸಂಪೂರ್ಣ ಹೊಂಡ ಗುಂಡಿಗಳಿಂದ ತುಂಬಿದೆ.
ರಸ್ತೆಯಲ್ಲಿ ದೊಡ್ಡ ದೊಡ್ಡ ಹೊಂಡಗಳು ಆಗಿರುವ ಕಾರಣ ವಾಹನಗಳು ಹೊಂಡಗಳಿಗೆ ಬಿದ್ದು ವಾಹನಗಳ ಪಾಟ್ಸ್೯ಗಳು ಕಳಚಿ ಬೀಳುವಂತಾಗಿದೆ. ಅಲ್ಲದೇ ಈ ರಸ್ತೆ ಅಪಘಾತವನ್ನು ಆಹ್ವಾನಿಸುತ್ತಿದೆ. ರಸ್ತೆಯಲ್ಲಿ ಸಂಚರಿಸುವ ಜನ ಹಿಡಿ ಶಾಪ ಹಾಕುವಂತಾಗಿದೆ.
ಈ ರಸ್ತೆಯಿಂದ ಬೇಸತ್ತಿರುವ ಈ ಭಾಗದವರು ರಸ್ತೆಯ ಹೊಂಡದಲ್ಲಿ ತೆಂಗಿನ ಸಸಿ ನೆಟ್ಟು ಪ್ರತಿಭಟಿಸಿದ್ದಾರೆ. ಇನ್ನಾದರೂ ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿ ವರ್ಗದವರು ಇತ್ತ ಗಮನ ಹರಿಸಿ ಸುಸಜ್ಜಿತ ರಸ್ತೆ ವ್ಯವಸ್ಥೆ ಮಾಡಬೇಕಾಗಿದೆ.