ಅ.28ರಂದು ಸರಕಾರಿ‌‌ ನೌಕರರ ಸಂಘದ ಚುನಾವಣೆ

0

4 ನಿರ್ದೇಶಕ ಸ್ಥಾನಕ್ಕೆ 5 ಮಂದಿ ಶಿಕ್ಷಕರು ಕಣದಲ್ಲಿ : ಬಿ.ಇ.ಒ. ಕಚೇರಿ 1 ಸ್ಥಾನಕ್ಕೆ ಇಬ್ಬರ ನಡುವೆ ಸ್ಪರ್ಧೆ

ಸುಳ್ಯ ತಾಲೂಕು ಸರಕಾರಿ ನೌಕರರ ಸಂಘದ ನಿರ್ದೇಶಕ ಸ್ಥಾನಕ್ಕೆ 28 ಮಂದಿ ಅವಿರೋಧ ಆಯ್ಕೆಯಾಗಿದ್ದು, ಶಿಕ್ಷಕರ ಕ್ಷೇತ್ರ ಹಾಗೂ ಬಿ.ಇ. ಒ ಕಚೇರಿ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ಸುಳ್ಯ ಎಪಿಎಂಸಿಯಲ್ಲಿ ಇಂದು ನಡೆಯುತ್ತಿದೆ.

ಶಿಕ್ಷಕ ಕ್ಷೇತ್ರದ 4 ನಿರ್ದೇಶಕ ಸ್ಥಾನಕ್ಕೆ 5 ಮಂದಿ ಕಣದಲ್ಲಿದ್ದಾರೆ.
ಶಿಕ್ಷಕರಾದ ಕುಶಾಲಪ್ಪ ತುಂಬತ್ತಾಜೆ, ಕುಶಾಲಪ್ಪ ಪಾರೆಪ್ಪಾಡಿ, ಗೋಪಾಲಕೃಷ್ಣ ಬನ, ಜಲಜಾಕ್ಷಿ‌ ಹಾಗೂ ಚಂದ್ರಶೇಖರ ಪಿ ಕಣದಲ್ಲಿದ್ದಾರೆ. 197 ಮಂದಿ ಮತದಾರರಿದ್ದು ಅತೀ ಹೆಚ್ಚು ಮತ ಪಡೆದ 4 ಮಂದಿ ನಿರ್ದೇಶಕರಾಗಿ ಆಯ್ಕೆಯಾಗುತ್ತಾರೆ.

ಬಿ.ಇ.ಒ. ಕಚೇರಿಯ 1 ನಿರ್ದೇಶಕ ಸ್ಥಾನಕ್ಕೆ ಕಚೇರಿ ಸಿಬ್ಬಂದಿಗಳಾದ ಶಿವಪ್ರಸಾದ್ ಕೆ.ವಿ. ಹಾಗೂ ಪೃಥ್ವಿ ಕುಮಾರ್ ನಡುವೆ ಸ್ಪರ್ಧೆಯಿದೆ. ಒಟ್ಟು 22 ಮಂದಿ ಮತದಾರರಿದ್ದಾರೆ. ಅತೀ ಹೆಚ್ಚು ಮತ ಪಡೆದವರು ನಿರ್ದೇಶಕರಾಗಿ ಆಯ್ಕೆಯಾಗುತ್ತಾರೆ.

ಇಂದು ಬೆಳಗ್ಗೆ ಯಿಂದ ಸಂಜೆ 4 ಗಂಟೆ ವರೆಗೆ ಸುಳ್ಯದ ಎಪಿಎಂಸಿಯಲ್ಲಿ ಮತದಾನ ನಡೆದು, ಇಂದೇ ಸಂಜೆ ಫಲಿತಾಂಶ ಘೋಷಣೆ ಯಾಗುವುದು.