ಆಸ್ಪತ್ರೆಯ ಬೇರೆ ಆಂಬ್ಯುಲೆನ್ಸ್ ಮೂಲಕ ಮಂಗಳೂರಿಗೆ ರೋಗಿಯ ರವಾನೆ
ಸುಳ್ಯ ಸರಕಾರಿ ಆಸ್ಪತ್ರೆಯಿಂದ ರೋಗಿಯೊಬ್ಬರನ್ನು ಮಂಗಳೂರಿಗೆ ಕರೆದೊಯ್ಯಲು ೧೦೮ ಆಂಬ್ಯುಲೆನ್ಸ್‌ನವರು ಒಪ್ಪದೇ ಇದ್ದು ಬಳಿಕ ರೋಗಿಯನ್ನು ಆಸ್ಪತ್ರೆಗೆ ಸಂಬಂಧಿಸಿದ ಬೇರೆ ಆಂಬ್ಯುಲೆನ್ಸ್ ಮೂಲಕ ರವಾನಿಸಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ೧೦೮ ವಾಹನ ನಿಲುಗಡೆ ಮತ್ತು ಸಿಬ್ಬಂದಿಗಳಿಗೆ ವಿಶ್ರಾಂತಿಗೆ ಸರಿಯಾದ ವ್ಯವಸ್ಥೆ ಇಲ್ಲ ಎಂದು ಸರಕಾರಿ ಆಸ್ಪತ್ರೆಯಿಂದ ಬೇರೆ ಆಸ್ಪತ್ರೆ ಗೆ ರೋಗಿಗಳನ್ನು ಕರೆದೊಯ್ಯುವುದಿಲ್ಲ ಎಂದು ೧೦೮ ಸಿಬ್ಬಂದಿಗಳು ಪಟ್ಟು ಹಿಡಿದಿದ್ದಾರೆ.
ಸುಳ್ಯ ಸರಕಾರಿ ಆಸ್ಪತ್ರೆಯಿಂದ ಮಂಗಳೂರು ಆಸ್ಪತ್ರೆಗೆ ರೋಗಿಯೊಬ್ಬರನ್ನು ಇಲ್ಲಿಯ ವೈದ್ಯರು ರೆಫರ್ ಮಾಡಿದ್ದು, ಈ ವೇಳೆ ರೋಗಿಯನ್ನು ಕರೆದುಕೊಂಡು ಹೋಗಲು ೧೦೮ ಗೆ ಕರೆ ಮಾಡಿದಾಗ ಮುಖ್ಯ ಕಚೇರಿಯಿಂದ ಈ ಮಾತು ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಬಳಿಕ ಕೆಲ ಸಮಯ ಚರ್ಚೆ ನಡೆದು ಕೊನೆಗೆ ಆಸ್ಪತ್ರೆಯ ಬೇರೆ ಆಂಬ್ಯುಲೆನ್ಸ್‌ನಲ್ಲಿ ರೋಗಿಯನ್ನು ಮಂಗಳೂರಿಗೆ ರವಾನಿಸಲಾಗಿದೆ.