ನಡುಗಲ್ಲು ಕಲ್ಮಕಾರು ಮುಖ್ಯರಸ್ತೆಯ ಕೊಲ್ಲಮೊಗ್ರದ ರಸ್ತೆಯ ಬದಿಯಲ್ಲಿ ಕಳೆದ ಕೆಲವು ವರ್ಷಗಳ ಹಿಂದೆ ಸುರಿದ ಮಳೆಗೆ ತಡೆಗೂಡೆ ಕುಸಿದು ಹೋಗಿದ್ದು ಇನ್ನೂ ಕೂಡ ಇದು ದುರಸ್ತಿಯಾಗಿಲ್ಲ.
ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಎದುರುಬದುರಾದಾರೆ ಅಪಘಾತ ಸಂಭವಿಸುವುದು ಖಚಿತ.
ಇದೀಗ ಮತ್ತೆ ರಸ್ತೆಯ ಅಂಚು ಕುಸಿಯುತ್ತಿದ್ದು ಅಪಾಯ ಕಟ್ಟಿಟ್ಟ ಬುತ್ತಿ ಎಂಬಂತಾಗಿದೆ. ಸಂಬಂಧ ಪಟ್ಟವರು ಇದರ ಬಗ್ಗೆ ಗಮನಹರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಈ ಭಾಗದ ಜನರು ಆಗ್ರಹಿಸಿದ್ದಾರೆ.
ಚಿತ್ರ, ವರದಿ :ಡಿ.ಹೆಚ್.