ಸುಳ್ಯ ಸ್ನೇಹ ವಿದ್ಯಾಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

0

ಕನ್ನಡ ಸುಲಲಿತವಾದ ಭಾಷೆ ಯಾಕೆಂದರೆ ನಮ್ಮ ಮಾತೃಭಾಷೆ. 1956 ನವೆಂಬರ್1 ರಂದು ಹರಿದು ಹಂಚಿ ಹೋಗಿದ್ದ ಪ್ರದೇಶಗಳನ್ನು ಭಾಷಾವಾರು ಪ್ರಾಂತ್ಯಗಳಾಗಿ ವಿಂಗಡಿಸಿ ಮೈಸೂರು ರಾಜ್ಯ ಎಂದು ನಾಮಕರಣ ಮಾಡಲಾಯಿತು. ನಂತರ 1973ರಲ್ಲಿ ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ಕನ್ನಡ ಉಳಿಸಿ,ಬೆಳೆಸಿ ಮುಂದಿನ ಪೀಳಿಗೆಯವರಿಗೆ ವಿಸ್ತರಿಸಬೇಕು.ವ್ಯಾಕರಣ ಬದ್ಧವಾಗಿ ಬರೆಯುವುದನ್ನು, ಮಾತಾಡುವುದನ್ನು ಕಲಿಯಬೇಕು” ಎಂದು ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಹೇಳಿದರು.

ನ.1 ಶುಕ್ರವಾರದಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾಲಾ ಶಿಕ್ಷಕಿ ಶ್ರೀಮತಿ ಅಶ್ವಿನಿ ಪಿ.ಎ ಅವರು ಮಾತನಾಡಿ “ನವೆಂಬರ್ 1ರಂದು ಜಾತಿ, ಮತ,ಪಂಥ ಎಲ್ಲಾ ಮೀರಿ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತೇವೆ. ಆಲೂರು ವೆಂಕಟರಾಯರು, ಕುವೆಂಪು, ಬಿ. ಎಂ. ಶ್ರೀಕಂಠಯ್ಯ ಮೊದಲಾದವರು ಕನ್ನಡ ರಾಜ್ಯದ ಕನಸು ಕಂಡವರು. ಅವರೆಲ್ಲರ ಹೋರಾಟದ ಫಲವಾಗಿ ಕನ್ನಡದ ಉಗಮವಾಯಿತು” ಎಂದು ಹೇಳಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ಕನ್ನಡ ಶಿಕ್ಷಕಿ ಶ್ರೀಮತಿ ಸವಿತಾ ಎಂ. ಇವರು ಮಾತನಾಡಿ”2,000 ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯ ಉಳಿವಿಗೆ ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು” ಎಂದರು.
ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿನಿ ಯಶ್ವಿತಾ ಸ್ವಾಗತಿಸಿ, ವಿದ್ಯುಲತಾ ವಂದಿಸಿ ಮತ್ತು ವಿದ್ಯಾರ್ಥಿನಿ ಚರಿತ ನಿರೂಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳು ಕನ್ನಡ ಗೀತೆಗಳನ್ನು ಹಾಡಿದರು.