ಜಿಲ್ಲು ಮೊoತೆರೊ ನಿಧನ

0

ದ.ಕ ಸಂಪಾಜೆ ಗ್ರಾಮದ ಜುಲಿಯಾನ್ ಜಿಲ್ಲು ಮೊoತೆರೊ ( ಬಾಬಣ್ಣ) ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಅ.31 ರಂದು ನಿಧನರಾದರು. ಅವರಿಗೆ 60 ವರ್ಷ ವಯಸ್ಸಾಗಿತ್ತು.

ಕೊಡಗು ಸಂಪಾಜೆ ವ್ಯಾಪ್ತಿಯಲ್ಲಿ ಹಲವಾರು ವರ್ಷಗಳಿಂದ ಬಾಬಣ್ಣ ಹೆಸರಿನಿಂದ ಚಿರಪರಿಚಿತರಾಗಿದ್ದು ಆಟೋ ರಿಕ್ಷಾ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದರು.ಅವರು ಕೆಲವು ತಿಂಗಳಿನಿಂದ ಅನಾರೋಗ್ಯಕ್ಕೀಡಾಗಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು. ಚಿಕಿತ್ಸೆಫಲಕಾರಿಯಾಗದೆ ನಿಧನರಾದರು.


ಮೃತರು ಪತ್ನಿ ಲಿಜಿ ಮೊoತೆರೊ ಮಕ್ಕಳಾದ ಸಿಂಚನ , ಸುಚನಾ , ಸಹೋದರರಾದ ರೋಮನ್ ಮೊoತೆರೊ, ಫ್ರಾನ್ಸಿಸ್ ಮೊoತೆರೊ, ಅಂಬ್ರೋಸ್ ಮೊoತೆರೊ, ಸಹೋದರಿ ಸಿಲ್ವಿಯಾ ಮೊoತೆರೊ,ಲಿಗೂರಿ ಮೊoತೆರೊ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.