Home ಪ್ರಚಲಿತ ಸುದ್ದಿ ಗುತ್ತಿಗಾರು: ಭಜನೆ ನಿಂದಕರ ವಿರುದ್ಧ ಪ್ರತಿಭಟನಾ ಮೆರವಣಿಗೆ,ಸಭೆ

ಗುತ್ತಿಗಾರು: ಭಜನೆ ನಿಂದಕರ ವಿರುದ್ಧ ಪ್ರತಿಭಟನಾ ಮೆರವಣಿಗೆ,ಸಭೆ

0

ಗುತ್ತಿಗಾರಿನಲ್ಲಿ ಭಜನೆಯನ್ನು ನಿಂದಿಸುತ್ತಿರುವರ ವಿರುದ್ಧ ಪ್ರತಿಭಟನಾ ಮೆರವಣಿಗೆ ಹಾಗೂ ಪ್ರತಿಭಟನಾ ಸಭೆ ಅ.31 ರಂದು ನಡೆಯಿತು.

ವಿವಿಧ ಭಜನಾ ಮಂಡಳಿಗಳು ಸೇರಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. ನೂರಾರು ಸಂಖ್ಯೆಯ ಭಜಕರು ಸೇರಿ ಗುತ್ತಿಗಾರಿನಲ್ಲಿ ಬಾಕಿಲದಿಂದ ಮುತ್ತಪ್ಪ ನಗರದವರೆಗೆ ಮೆರವಣಿಗೆ ಸಾಗಲಾಯಿತು.

ಮುತ್ತಪ್ಪ ನಗರದಲ್ಲಿ ಸಭೆ ನಡೆಸಲಾಗಿ ಹಿರಿಯ ಭಜಕ ಗಣರಾಜ್ ಭಟ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ರಮೇಶ್ ಮೆಟ್ಟಿನಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ಪಾಲ್ತಾಡು ಪ್ರಾರ್ಥಿಸಿದರು. ಚಂದ್ರಶೇಖರ ಬಾಳುಗೋಡು ಪ್ರಾಸ್ತಾವಿಕವಾಗಿ ಮಾತನಾಡಿದರು. ಲೊಕೇಶ್ವರ ಡಿ.ಆರ್ ವಂದಿಸಿದರು. ಕಿಶೋರ್ ಕುಮಾರ್ ಪೈಕ ಬೊಮ್ಮದೆರೆ ಕಾರ್ಯಕ್ರಮ ನಿರೂಪಿಸಿದರು.

NO COMMENTS

error: Content is protected !!
Breaking