ಕ್ರಿಯೇಟಿವ್ ಸ್ಕೂಲ್ ಆಫ್ ಆರ್ಟ್ಸ್ ಸುಳ್ಯ, ರೋಟರಿ ಇಂಟರ್‍ಯಾಕ್ಟ್ ಕ್ಲಬ್ ರೋಟರಿ ಶಾಲೆ ಮಿತ್ತಡ್ಕ, ಸುಳ್ಯ ಮತ್ತು ಸುದ್ದಿ ಬಿಡುಗಡೆ ಪತ್ರಿಕೆ, ಸುದ್ದಿ ವೆಬ್‌ಸೈಟ್ ಹಾಗೂ ಸುದ್ದಿ ಚಾನೆಲ್ ಸಹಯೋಗದೊಂದಿಗೆ ಮಕ್ಕಳ ದಿನಾಚರಣೆಯ ಪ್ರಯುಕ್ತ ಸುಳ್ಯ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ ವರ್ಣ ಚಿತ್ತಾರ-2024 ಸ್ಪರ್ಧೆಯು ನ.03ರಂದು 9.30ಕ್ಕೆ ಸರಿಯಾಗಿ ರೋಟರಿ ಪ್ರಾಥಮಿಕ ಶಾಲಾ ಸಭಾಭವನದಲ್ಲಿ ನಡೆಯಲಿದೆ.
ಚಿತ್ರಕಲಾ ಸ್ಪರ್ಧೆಗಳು: ವಿಭಾಗ-1: ಎಲ್.ಕೆ.ಜಿ, ಯು.ಕೆ.ಜಿ. ವಿಭಾಗ-2: 1ನೇ, 2ನೇ, ವಿಭಾಗ-3: 3ನೇ,4ನೇ. (ವಿ.ಸೂ.: 1ನೇ ತರಗತಿಯಿಂದ ೪ನೇ ತರಗತಿವರೆಗಿನ ಸ್ಪರ್ಧಿಗಳಿಗೆ ಪೂರ್ವಾಹ್ನ 10.30ಕ್ಕೆ ಸರಿಯಾಗಿ ಸ್ಪರ್ಧೆ ಪ್ರಾರಂಭಗೊಳ್ಳಲಿರುವುದು.) ವಿಭಾಗ-4: 5ನೇ, 6ನೇ, ವಿಭಾಗ-5:7ನೇ, 8ನೇ, ವಿಭಾಗ-9:9ನೇ, 10ನೇ ಎಂದು ಆರು ವಿಭಾಗಗಳಲ್ಲಿ ನಡೆಯಲಿವೆ. (ವಿ.ಸೂ.: 5ರಿಂದ 10ನೇ ತರಗತಿವರೆಗಿನ ಸ್ಪರ್ಧಿಗಳು ಪೂರ್ವಾಹ್ನ 9.30ಕ್ಕೆ ಹಾಜರಿರಬೇಕು) ಡ್ರಾಯಿಂಗ್ ಹಾಳೆಯನ್ನು ಒದಗಿಸಲಾಗುವುದು. ಚಿತ್ರ ಬಿಡಿಸುವ ಪರಿಕರಗಳನ್ನು ವಿದ್ಯಾರ್ಥಿ ಗಳೇ ತರತಕ್ಕದ್ದು. ಪ್ರತೀ ವಿಭಾಗದಲ್ಲಿ ಉತ್ತಮ 5 ಕಲಾಕೃತಿಗಳನ್ನು ಆಯ್ಕೆ ಮಾಡಲಾಗುವುದು. ಸುಳ್ಯ ತಾಲೂಕಿನ ಆಸಕ್ತ ಎಲ್ಲಾ ವಿದ್ಯಾರ್ಥಿಗಳಿಗೆ ಭಾಗವಹಿ ಸಲು ಅವಕಾಶವಿದೆ.
ಭಾಗವಹಿಸಿದ ಎಲ್ಲಾ ವಿದ್ಯಾರ್ಥಿ ಗಳಿಗೆ ಪ್ರಮಾಣ ಪತ್ರದೊಂದಿಗೆ ಬಹುಮಾನ ನೀಡಲಾಗುವುದು ಎಂದು ಸಂಘಟಕರಾದ ಶ್ರೀಹರಿ ಪೈಂದೋಡಿ ಹಾಗೂ ಪ್ರಸನ್ನ ಐವರ್ನಾಡು ತಿಳಿಸಿದ್ದಾರೆ.
ಬೆಳಿಗ್ಗೆ 9.30ಕ್ಕೆ ಕಾರ್ಯಕ್ರಮವನ್ನು ಸುಳ್ಯ ರೋಟರಿ ವಿದ್ಯಾಸಂಸ್ಥೆಗಳ ಸಂಚಾಲಕರಾದ ರೊ| ಪಿಪಿ. ಪಿಹೆಚ್‌ಎಫ್. ಪ್ರಭಾಕರನ್ ನಾಯರ್‌ಉದ್ಘಾಟಿಸಲಿ ದ್ದಾರೆ. ಸಭಾಧ್ಯಕ್ಷತೆಯನ್ನು ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷರಾದ ರೊ.ಶ್ರೀಮತಿ ಯೋಗಿತಾ ಗೋಪಿನಾಥ್‌ರವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸುದ್ದಿ ಸಮೂಹ ಸಂಸ್ಥೆಗಳ ಮಾಲಕರಾದ ಡಾ. ಯು.ಪಿ. ಶಿವಾನಂದ, ಸುಳ್ಯ ಜೂನಿಯರ್ ಕಾಲೇಜಿನ ಅಧ್ಯಾಪಕರಾದ ಡಾ| ಸುಂದರ್ ಕೇನಾಜೆ, ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಅನಂತರಾಜ್ ಮ್ಯಾಪನ, ಸುಳ್ಯ ಸುದ್ದಿ ಬಿಡುಗಡೆ ಸಂಪಾದಕರಾದ ಹರೀಶ್ ಬಂಟ್ವಾಳ್, ಸುಳ್ಯ ಸುದ್ದಿ ಬಿಡುಗಡೆ ಕಚೇರಿ ವ್ಯವಸ್ಥಾಪಕರಾದ ಯಶ್ಚಿತ್ ಕಾಳಂಮನೆ ಇವರು ಭಾಗವಹಿಸಲಿದ್ದಾರೆ.
ರೋಟರಿ ಹೈಸ್ಕೂಲ್‌ನ ಮುಖ್ಯೋ ಪಾಧ್ಯಾಯಿನಿ ಶ್ರೀಮತಿ ವೀಣಾ ಶೇಡಿಕಜೆ, ರೋಟರಿ ಪ್ರಾಥಮಿಕ ಶಾಲಾ ಮುಖ್ಯೋ ಪಾಧ್ಯಾಯಿನಿ ಶ್ರೀಮತಿ ರೋಹಿಣಿ ಅಂಬೆಕಲ್ಲು, ಇಂಟರ್ಯಾಕ್ಟ್ ಕ್ಲಬ್‌ನ ಅಧ್ಯಕ್ಷೆ ಕು| ಹಿಮಾನಿ ಎ.ಎಸ್. ಗೌರವ ಉಪಸ್ಥಿತರಿರುತ್ತಾರೆ.
ಸ್ಪರ್ಧೆಯ ಫಲಿತಾಂಶವನ್ನು ನವೆಂಬರ್ ೦4ರ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು.