ಓಡಬಾಯಿ: ಮೈಸೂರು ಪೊಲೀಸರಿಂದ ತಪ್ಪಿಸಿ ಪರಾರಿಯಾದ ಕೈದಿ

0

ಸುಳ್ಯ ಓಡಬಾಯಿ ಸಮೀಪ ಮೈಸೂರು ಪೊಲೀಸರ ಕೈನಿಂದ ಕಳ್ಳನೊಬ್ಬ ತಪ್ಪಿಸಿಕೊಂಡು ಬಳಿಕ ಊರಿನವರ ಕೈ ಗೆ ಸಿಕ್ಕಿಹಾಕಿಕೊಂಡ ಘಟನೆ ನ.3 ರಂದು ಸಂಜೆ ನಡೆದಿದೆ ಎಂದು ತಿಳಿದು ಬಂದಿದೆ.

ಬ್ಯಾಂಕ್ ಖಾತೆ ಹ್ಯಾಕ್ ಮತ್ತು ಕೋಟ್ಯಂತರ ರೂ. ವಂಚನೆ ಮಾಡಿರುವ ಆರೋಪ ಹೊತ್ತುಕೊಂಡಿರುವ ಕಳ್ಳನೊಬ್ಬನನ್ನು ಮೈಸೂರು ಕ್ರೈಂ ಪೊಲೀಸರು ಮಂಗಳೂರಿಗೆ ಕರೆದುಕೊಂಡು ಹೋಗುತ್ತಿದ್ದರು.

ಸುಳ್ಯ ಮಾರ್ಗವಾಗಿ ಪೊಲೀಸರು ತೆರಳುತ್ತಿದ್ದ ಸಂದರ್ಭದಲ್ಲಿ ಓಡಬಾಯಿ ಸಮೀಪ ಚಹಾ ಕುಡಿಯಲು ನಿಲ್ಲಿಸಿದ್ದು ಈ ವೇಳೆ ಕಳ್ಳ ಕೂಡ ಇವರೊಂದಿಗೆ ಚಹಾ ಸವಿದು, ತಿಂಡಿಯು ಕೂಡಾ ತಿಂದಿದ್ದಾನೆ, ಕೈತೊಳೆಯಲು ಹೋದ ಕಳ್ಳ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಇದನ್ನು ನೋಡಿದ ಸ್ಥಳೀಯರು ಜೋರಾಗಿ ಕಿರುಚಿಕೊಳ್ಳುತ್ತಿರುವಾಗಲೇ ಈತ ಹೋಟೆಲ್ ನ ಹಿಂದೆ ಇದ್ದ ಪಯಸ್ವಿನಿ ನದಿಗೆ ಹಾರಿ ದೊಡ್ಡೇರಿ ಕಡೆಗೆ ಓಡಿದ್ದಾನೆ.

ಬಟ್ಟೆಯಲ್ಲಿ ಕೆಸರು ನೀರು ಆಗಿರುವುದನ್ನು ಕಂಡು ಹತ್ತಿರದ ಮನೆಯವರಿಗೆ ಆತನ ಬಗ್ಗೆ ಸಂಶಯ ಬರುತ್ತದೆ. ಆತನನ್ನು ಕೆಲವು ಯುವಕರು ಆತನನ್ನು ಹಿಡಿದು ವಿಚಾರಿಸಿದಾಗ ಪೊಲೀಸರ ಕೈನಿಂದ ತಪ್ಪಿಸಿಕೊಂಡ ವಿಚಾರ ಬೆಳಕಿಗೆ ಬಂದಿದ್ದು, ಇದೇ ವೇಳೆ ಸಮಯ ಮೈಸೂರು ಪೊಲೀಸರು ಸ್ಥಳಕ್ಕೆ ಬಂದು ಆತನನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಸಫಲರಾಗಿದ್ದಾರೆ.