ಅಜ್ಜಾವರ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರಾಗಿ ದೇವಕಿ ಕಾಟಿಪಳ್ಳ – ವಿಷ್ಣುನಗರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷತೆಗೆ ದೇವಕಿಯವರ ಹೆಸರನ್ನು ಸದಸ್ಯ ಪ್ರಸಾದ್ ರೈಯವರು ಸೂಚಿಸಿದರು.
ಅಜ್ಜಾವರ ಗ್ರಾ.ಪಂ. ನ ಅಧ್ಯಕ್ಷತೆ ಎಸ್ಸಿ ಮಹಿಳೆಗೆ ಮೀಸಲಾಗಿತ್ತು. ಕಳೆದ ಬಾರಿ ಅಧ್ಯಕ್ಷತೆ ಆಯ್ಕೆ ಸಂದರ್ಭ ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ಬೇಬಿ ಮತ್ತು ದೇವಕಿ ಆಕಾಂಕ್ಷಿಗಳಾಗಿದ್ದರು. ಬಳಿಕ ಮಾತುಕತೆ ನಡೆದು ಒಂದೂಕಾಲು ವರ್ಷದಂತೆ ಇಬ್ಬರಿಗೂ ಅಧ್ಯಕ್ಷತೆ ಹಂಚಿಕೊಡಲು ಪಕ್ಷ ನಾಯಕರು ನಿರ್ಧರಿಸಿದರು. ಅದರಂತೆ ಮೊದಲ ಅವಧಿಗೆ ಅಡ್ಪಂಗಾಯ ವಾರ್ಡ್ ಸದಸ್ಯೆ ಬೇಬಿ ಅಧ್ಯಕ್ಷರಾದರು. ಬೇಬಿಯವರ ಅಧ್ಯಕ್ಷತೆ ಒಂದೂಕಾಲು ವರ್ಷ ಪೂರ್ಣಗೊಳ್ಳುತಿದ್ದಂತೆ ಅವರು ರಾಜೀನಾಮೆ ನೀಡಿದ್ದರು. ಇದರಿಂದ ತೆರವಾದ ಸ್ಥಾನಕ್ಕೆ ನ.7ರಂದು ಚುನಾವಣೆ ನಡೆಯಿತು. ಕಾಂಗ್ರೆಸ್ ಬೆಂಬಲಿತ ಸದಸ್ಯೆ ದೇವಕಿಯವರು ಅಧ್ಯಕ್ಷತೆಗೆ ಒಬ್ಬರೇ ನಾಮಪತ್ರ ಸಲ್ಲಿಸಿದ್ದು ಅವರು ಅವಿರೋಧವಾಗಿ ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿ ತಹಶೀಲ್ದಾರ್ ಮಂಜುಳಾ ಆಯ್ಕೆ ಪಕ್ರಿಯೆ ನಡೆಸಿಕೊಟ್ಟರು.
ಪಂಚಾಯತ್ ಸದಸ್ಯರುಗಳಾದ ಪ್ರಸಾದ್ ರೈ ಮೇನಾಲ, ಲೀಲಾ ಮನಮೋಹನ ಮುಡೂರು, ವಿಶ್ವನಾಥ ಮುಳ್ಯಮಠ, ರಾಹುಲ್ ಅಡ್ಪಂಗಾಯ, ವಿಶ್ವನಾಥ ನೆಹರೂನಗರ, ಅಬ್ದುಲ್ಲ ಅಜ್ಜಾವರ, ರಾಘವ ಮುಳ್ಯ, ಶಿವಕುಮಾರ್ ಮುಳ್ಯ, ಗೀತಾ ಕಲ್ಲಗುಡ್ಡೆ, ಶ್ವೇತಾ ಶಿರಾಜೆ ಹಾಗೂ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಸದಸ್ಯ ರಂಜಿತ್ ರೈ ಮೇನಾಲ, ತಾಲೂಕು ಸದಸ್ಯ ಅಬ್ಬಾಸ್ ಅಡ್ಪಂಗಾಯ, ಪ್ರಕಾಶ್ ಮೊದಲಾದವರಿದ್ದರು.