ಬಹುಗ್ರಾಮ ಕುಡಿಯುವ ಯೋಜನೆ ಕಾಮಗಾರಿ ಎಫೆಕ್ಟ್

0

ಸೈಡ್ ಕೊಟ್ಟ ಲಾರಿಯ ಟೈರ್ ಹೂತು ಬಾಕಿ

ಚೊಕ್ಕಾಡಿ ಸುಳ್ಯ ಮಾರ್ಗದ ಜೋಗಿಯಡ್ಕ ಎಂಬಲ್ಲಿ ಲಾರಿಯೊಂದರ ಟಯರ್ ಹೂತು ಲಾರಿ ಬಾಕಿಯಾದ ಘಟನೆ ಇಂದು ಬೆಳಗ್ಗೆ ನಡೆದಿದೆ.

ಬಹುಗ್ರಾಮ ಕುಡಿಯುವ ಯೋಜನೆ ವತಿಯಿಂದ ಪೈಪ್ ಅಳವಡಿಕೆ ಕೆಲಸ ಅವೈಜ್ಞಾನಿಕವಾಗಿ ನಡೆಸಿ ಪೈಪ್ ಕಣಿಯನ್ನು ಸರಿಯಾಗಿ ಮುಚ್ಚದೆ ಇರುವುದು, ಮುಚ್ಚಿದರೂ ಮಣ್ಣು ಹಾಕಿ ಗಟ್ಟಿ ಮಾಡದಿರುವುದರಿಂದ ತೊಂದರೆ ಉಂಟಾಗಿದೆ. ಟಯರ್ ಹೂತು ಲಾರಿ ಬಾಕಿಯಾಗಿದ್ದು ಬಳಿಕ ಜೆಸಿಬಿ ತರಿಸಿ ಲಾರಿಯನ್ನು ಅಲ್ಲಿಂದ ತೆರವುಗೊಳಿಸಲಾಯಿತು.