ಆರ್ತಾಜೆಯಲ್ಲಿ ಲೋ ವೋಲ್ಟೇಜ್ ವಿದ್ಯುತ್ ಸಮಸ್ಯೆ

0

ಸುಮಾರು 15 ದಿನಗಳಿಂದ ಪದೇ ಪದೇ ಕಾಡುತ್ತಿರುವ ಸಮಸ್ಯೆ

ಸುಳ್ಯದ ಆರ್ತಾಜೆ ಪರಿಸರದಲ್ಲಿ ಕಳೆದ ಕೆಲವು ದಿನಗಳಿಂದ ವಿದ್ಯುತ್ ಲೋ ವೋಲ್ಟೇಜ್ ಕಾರಣ ಸ್ಥಳೀಯ ನಿವಾಸಿಗಳು ಸಂಕಷ್ಟದಲ್ಲಿರುವ ಬಗ್ಗೆ ವರದಿಯಾಗಿದೆ.
ಪ್ರಸ್ತುತ ಸಂದರ್ಭ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ವೃದ್ದರು, ಮಕ್ಕಳು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.


ಈ ಭಾಗದ ಲೈನ್‌ಮೆನ್ ದಿನಂಪ್ರತಿ ಬಂದು ಅವರ ಕರ್ತವ್ಯ ಚಾರ್ಜ್ ಮಾಡಿ ಹೋಗುತ್ತಿದ್ದಾರೆ. ಆದರೆ ಅದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ.
ಈ ಸಮಸ್ಯೆ ಕುರಿತು ಮೂರು ತಿಂಗಳ ಹಿಂದೆ ಸ್ಥಳೀಯರು ಮೆಸ್ಕಾಂ ಇಲಾಖೆಗೆ ಮನವಿಯನ್ನು ನೀಡಿದಾಗ ಎ.ಈ ಯವರು ೩ ಫೇಸ್ ಲೈನ್ ಅಳವಡಿಕೆ ಮಾಡುವುದಾಗಿ ಭರವಸೆ ನೀಡಿದ್ದರು.


ಆದರೆ ಇದುವರೆಗೂ ಈ ಬಗ್ಗೆ ಕೆಲಸ ಆರಂಭ ಮಾಡಲಿಲ್ಲ ಎಂದು ಸ್ಥಳೀಯರು ತಮ್ಮ ಸಮಸ್ಯೆಗಳನ್ನು ಸುದ್ದಿಗೆ ತಿಳಿಸಿದ್ದಾರೆ.