
ಸುಳ್ಯ ಜೂನಿಯರ್ ಕಾಲೇಜ್ ಕಡೆಯಿಂದ ಜ್ಯೋತಿ ಸರ್ಕಲ್ ಕಡೆಗೆ ಹೋಗುವ ರಸ್ತೆ ಬದಿ ಮಾಯಾ ಕಂಪೌಂಡ್ ನಲ್ಲಿರುವ ಮನೆಯವರು ಸಾರ್ವಜನಿಕ ರಸ್ತೆಗೆ ಅಡಚಣೆ ಆಗುವ ರೀತಿಯಲ್ಲಿ ಕಂಪೌಂಡಿಗೆ ರಕ್ಷಣಾ ಗೋಡೆ ನಿರ್ಮಿಸಿರುವುದನ್ನು ಸ್ಥಳೀಯರ ದೂರಿನ ಮೇರೆಗೆ ನಗರ ಪಂಚಾಯತ್‌ನವರು ಬಂದು ತೆರವುಗೊಳಿಸಿದ ಘಟನೆ ವರದಿಯಾಗಿದೆ.

ಮಾಯಾ ಕಂಪೌಂಡ್ ನ ಆವರಣ ಗೋಡೆಗೆ ತೊಂದರೆಯಾಗಬಾರದೆಂದು ಕಾಂಪೌಂಡ್ ಸುತ್ತ ಕ್ರಾಂಕೀಟ್ ದಿಬ್ಬವನ್ನು ನಿರ್ಮಿಸಲಾಗಿತ್ತು. ಇದರಿಂದಾಗಿ ಅಲ್ಲಿರುವ ಇತರ ಮನೆಗಳಿಗೆ ಹೋಗುವ ರಸ್ತೆ ಆತಂಕಿತವಾಗಿತ್ತು. ಕಸದ ಲಾರಿ ಸಾಗುವುದು ಕಷ್ಟವಾಗುತ್ತಿತ್ತು. ಸಾರ್ವಜನಿಕರು ಈ ಬಗ್ಗೆ ನ.ಪಂ.ಗೆ ದೂರು ನೀಡಿದ್ದರು. ಸಾರ್ವಜನಿಕರ ದೂರಿನ ಮೇರೆಗೆ ನಗರ ಪಂಚಾಯತ್ ಜನಪ್ರತಿನಿಧಿಗಳು ಹಾಗೂ ಮುಖ್ಯಾಧಿಕಾರಿ, ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಅನಧಿಕೃತ ದಿಬ್ಬವನ್ನು ತೆರವುಗೊಳಿಸಿದ್ದಾರೆ.
ಅದೇ ಮನೆಯವರು ತಮ್ಮ ಆವರಣ ಗೋಡೆಯ ಇನ್ನೊಂದು ಪಕ್ಕದಲ್ಲಿ ಹಾಕಿದ್ದ ಮರಳು, ಮರದ ತುಂಡುಗಳನ್ನು ಕೂಡ ನಗರ ಪಂಚಾಯತ್ ನವರ ಕಸವಿಲೆವಾರಿ ವಾಹನದಲ್ಲಿ ತುಂಬಿಸಿ ಕೊಂಡೊಯ್ದರು.

ತೆರವು ಕಾರ್ಯಚರಣೆ ಸಂದರ್ಭದಲ್ಲಿ ನಗರ ಮುಖ್ಯಾಧಿಕಾರಿ ಸುಧಾಕರ್ ಮತ್ತು ಸಿಬ್ಬಂದಿಗಳು, ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಎ ನೀರಬಿದರೆ, ಸದಸ್ಯರಾದ ಸರೋಜಿನಿ ಪೆಲ್ತಡ್ಕ, ಉಮ್ಮರ್ ಕೆ.ಎಸ್., ಡೇವಿಡ್ ದೀರಾ ಕ್ರಾಸ್ತ, ಶರೀಫ್ ಕಂಠಿ, ಶಿಲಾವತಿ ಕುರುಂಜಿ, ಕಿಶೋರಿ ಶೇಟ್ ಮೊದಲಾದವರು ಇದ್ದರು