ಅಯ್ಯನಕಟ್ಟೆ: ರಸ್ತೆ ಮಧ್ಯೆ ರಂಧ್ರ

0

ಬೆಳ್ಳಾರೆ ಸಮೀಪದ ಅಯ್ಯನಕಟ್ಟೆ ಕ್ರಾಸ್ ನಲ್ಲಿ ಮುಖ್ಯ ರಸ್ತೆಯಿಂದ ಚೊಕ್ಕಾಡಿ ಬೆಂಗಮಲೆ ಕಡೆ ತಿರುಗುವಲ್ಲಿ ರಸ್ತೆ ಮಧ್ಯೆ ರಂಧ್ರ ಬಿದ್ದಿದ್ದು ವಾಹನ ಸಂಚಾರಕರಿಗೆ ಸಂಚಕಾರ ಉಂಟು ಮಾಡುವುದು ಗ್ಯಾರಂಟಿಯಾಗಿದೆ.

ಈ ರಂಧ್ರ ಇರುವ ಅಡಿ ಭಾಗದಲ್ಲಿ ಸಣ್ಣ ತೊರೆಯೊಂದು ಹರಿಯುತಿದ್ದು ಅದಕ್ಕೆ ಮೋರಿಯಿದೆ. ಆದರೆ ರಸ್ತೆಯ ಮಧ್ಯೆ ರಂದ್ರ ಬಿದ್ದಿರುವುದು ನೋಡಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಸಂಭಾವ್ಯ ಅಪಾಯ ಆಗುವು ಮುಚ್ಚೆಯೇ ತುರ್ತು ಕ್ರಮ‌ ಕೈಗೊಂಡರೆ ಒಳಿತು.