ಹುಡುಕಾಡುತ್ತಿರುವ ಸುಳ್ಯ ಪೊಲೀಸರು
ಸುಳ್ಯದ ಹಳೆಗೇಟಿನಲ್ಲಿರುವ ಲಾಡ್ಜ್ ಒಂದಕ್ಕೆ ರೂಮು ಕೇಳಲು ಬಂದ ಇಬ್ಬರು ಅಪರಿಚಿತರು ಲಾಡ್ಜಿನ ರಿಜಿಸ್ಟರ್ ಪುಸ್ತಕವನ್ನು ಹೊತ್ತೊಯ್ದಿದ್ದಾರೆಂಬ ಘಟನೆ ವರದಿಯಾಗಿದೆ.
ನಿನ್ನೆ ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ ಕಾರಿನಲ್ಲಿ ಬಂದ ಇಬ್ಬರು ಅಪರಿಚಿತರು ಲಾಡ್ಜಿಗೆ ಬಂದು ರೂಮು ಕೇಳಿದ್ದು, ಲಾಡ್ಜ್ ಸಿಬ್ಬಂದಿ ರೂಮು ತೋರಿಸಿ ಅದನ್ನು ಸಿದ್ಧಪಡಿಸಲು ತೆರಳಿದಾಗ ರೂಂ ಕೇಳಿಕೊಂಡು ಬಂದವರು ಕೌಂಟರ್ ಬಳಿಯಿದ್ದ ಲಾಡ್ಜಿನ ರಿಜಿಸ್ಟರ್ ಪುಸ್ತಕವನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆನ್ನಲಾಗಿದೆ.
ಈ ಬಗ್ಗೆ ಲಾಡ್ಜ್ ನ ಮಾಲಕರು ಸುಳ್ಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು ಪೊಲೀಸರು ಸಿ.ಸಿ.ಟಿವಿ ಫೂಟೇಜ್ ಸಂಗ್ರಹ ಹಿಸಿದ್ದಾರೆ. ಪುಸ್ತಕ ಕದ್ದೊಯ್ದವರು ಯಾರು ? ಯಾಕಾಗಿ ಹಾಗೆ ಮಾಡಿದರು ? ಇನ್ನಿತರ ವಿಚಾರಗಳ ಬಗ್ಗೆ ಪೋಲೀಸರು ತನಿಖೆ ಆರಂಭಿಸಿದ್ದಾರೆಂದು ತಿಳಿದುಬಂದಿದೆ.