ಕನ್ನಡ ಸಾಹಿತ್ಯ ಪರಿಷತ್ತು, ಪಂಜ ಹೋಬಳಿ ಘಟಕದ ಸಹಯೋಗದಲ್ಲಿ ಸುವರ್ಣ ಸಂಭ್ರಮ ವರ್ಷಾಚರಣೆ ಅಂಗವಾಗಿ- ಉಸನ್ಯಾಸ, ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಸಾಹಿತ್ಯಕ ಸ್ಪರ್ಧೆಗಳು ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮವು ಕ. ಸಾ. ಪ ಸುಳ್ಯ ತಾಲೂಕು ಅಧ್ಯಕ್ಷರಾದ ಚಂದ್ರಶೇಖರ್ ಪೇರಾಲ್ ರವರ ಮಾರ್ಗದರ್ಶನದಲ್ಲಿ ಹಾಗೂ ಶ್ರೀಮತಿ ಶೀಲಾವತಿ ಕೊಳಂಬೆಯವರ ನೇತೃತ್ವದಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಕ.ಸಾ.ಪ. ಪಂಜ ಹೋಬಳಿ ಘಟಕದ ಅಧ್ಯಕ್ಷರಾದ ಬಾಬು ಗೌಡ ಅಚ್ರಪ್ಪಾಡಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀಮತಿ ಲೀಲಾ ದಾಮೋದರ್ , ಶ್ರೀಮತಿ ಭುವನೇಶ್ವರಿ, ಗ್ರಾ. ಪಂ.ಉಪಾಧ್ಯಕ್ಷರು, ಬಾಲಕೃಷ್ಣ ಬೊಳ್ಳೂರು ನಿವೃತ್ತ ಪ್ರಾಂಶುಪಾಲರು ಉಪಸ್ಥಿತರಿದ್ದರು.
ಸ್ಪರ್ಧಾ ನಿರ್ಣಾಯಕ ರಾಗಿ ಶ್ರೀಮತಿ ಶಿವದೇವಿ ಅವನೀಶ ಚಂದ್ರ, ಶ್ರೀಮತಿ ಪಾರ್ವತಿ ಕಾಮತ್, ಜೀವನ್ ತಳೂರು ನೆರವಾದರು. ಪೋಷಕರಿಗೆ ಆಶುಭಾಷಣ, ಕವಿ ಕೃತಿ ಪರಿಚಯ, ಭಾವಗೀತೆ ಸ್ಪರ್ಧೆಗಳನ್ನು, ವಿದ್ಯಾರ್ಥಿಗಳಿಗೆ ಚಿತ್ರಕಲೆ, ಪ್ರಬಂಧ, ಅಂದದ ಕೈಬರಹ, ಮುಂತಾದ ಸ್ಪರ್ಧೆಗಳನ್ನು ನಡೆಸಲಾಗಿತ್ತು. ಶಾಲಾ ಮಕ್ಕಳಿಂದ ಗೀತಾ ಗಾಯನ ನಡೆಯಿತು. ಕಾರ್ಯಕ್ರಮದಲ್ಲಿ ಪೋಷಕರು, ವಿವಿಧ ಸಂಘ ಸಂಸ್ಥೆಯವರು, ಶಿಕ್ಷಕರು, ಪಾಲ್ಗೊಂಡಿದ್ದರು. ಮುಖ್ಯ ಶಿಕ್ಷಕಿ ರೂಪವಾಣಿ ಪ್ರಾಸ್ತಾವಿಕ ಮಾತು ಆಡಿದರು.
ಶಿಕ್ಷಕರಾದ ಶಿವಕುಮಾರ್ ಎಲ್ಲರನ್ನು ಸ್ವಾಗತಿಸಿ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಈಶ್ವರ. ಕೆ. ವಂದಿಸಿದರು. ಕ. ಸಾ. ಪ. ಸದಸ್ಯೆ ಚರಿಷ್ಮಾ ಕಡಪಳ ಕಾರ್ಯಕ್ರಮವನ್ನು ನಿರೂಪಿಸಿದರು.