ಸುಳ್ಯ ಶ್ರೀ ರಾಮಪೇಟೆಯ ರಾಮ ಮಂದಿರದಲ್ಲಿ ವರ್ಷಂಪ್ರತಿ ಜರುಗುವ 82 ನೇ ವರ್ಷದ ಏಕಾಹ ಭಜನೆಯು ನ.12 ರಂದು ನಡೆಯಲಿರುವುದು.
ಪ್ರಾತ:ಕಾಲ ಗಂಟೆ 6.30 ಕ್ಕೆ ದೀಪ ಸ್ಥಾಪನೆಯು ಕಾರ್ಕಳ ಮೋಹನದಾಸ ಶೆಣೈ ಯವರು ನೆರವೇರಿಸಲಿದ್ದಾರೆ.
ಬಳಿಕ ತಾಲೂಕಿನ ವಿವಿಧ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಮಧ್ಯಾಹ್ನ 12.30 ಕ್ಕೆ ಮಹಾಪೂಜೆಯು ನಡೆದು ಸಂಜೆ ಗಂಟೆ 6.30 ರಿಂದ ವಿಶೇಷವಾಗಿ ಹೂವಿನ ಅಲಂಕಾರ ಪೂಜೆಯು ನಡೆಯಲಿದೆ.
ರಾತ್ರಿ ಗಂಟೆ 8.30 ರಿಂದ ಖ್ಯಾತ ದಾಸ ಸಂಕೀರ್ತನಕಾರ ಅರವಿಂದ ಆಚಾರ್ಯ ಮತ್ತು ಬಳಗದವರಿಂದ ದಾಸ ಸಂಕೀರ್ತನೆಯು ನಡೆಯಲಿದೆ.
ರಾತ್ರಿ 12.30 ಕ್ಕೆ ಮಹಾಪೂಜೆಯಾಗಿ ಪ್ರಸಾದ ವಿತರಣೆ ಯಾಗಲಿರುವುದು.
ಈ ಸಂದರ್ಭದಲ್ಲಿ ಸೇವಾ ರೂಪದ ಉಲುಪೆ ಮೆರವಣಿಗೆಯು ರಾಮ ಸೇವಾ ಸಮಿತಿ ಜಟ್ಟಿಪಳ್ಳ, ಚೆನ್ನಕೇಶವ ದೇವಸ್ಥಾನದ ಬಳಿಯಿಂದ, ಬಂಗ್ಲೆಗುಡ್ಡೆ ಬಳಿಯಿಂದ, ಮಂಜುನಾಥೇಶ್ವರ ಭಜನಾ ಮಂದಿರ ಬೆಟ್ಟಂಪಾಡಿ, ಕಾಯರ್ತೋಡಿ ವಿಷ್ಣು ಸರ್ಕಲ್, ಧರ್ಮದರ್ಶಿ ಮಂಡಳಿಯ ಪರವಾಗಿ ಖಾಸಗಿ ಬಸ್ ನಿಲ್ದಾಣದ ಬಳಿಯ ಪೆಟ್ರೋಲ್ ಬಂಕಿನಿಂದ
ಮಂದಿರದವರೆಗೆ ಸಾಗಿ ಬರಲಿದೆ.
ನ.13 ರಂದು ಸೂರ್ಯೋದಯಕ್ಕೆ ಮಹಾ ಮಂಗಳಾರತಿಯಾಗಿ ಪ್ರಸಾದ ವಿತರಣೆಯೊಂದಿಗೆ ಭಜನಾ ಕಾರ್ಯಕ್ರಮ ಸಂಪನ್ನವಾಗಲಿದೆ ಎಂದು ಮಂದಿರದ ಧರ್ಮದರ್ಶಿ ಮಂಡಳಿಯ ಅಧ್ಯಕ್ಷರಾದ ಕೆ.ಉಪೇಂದ್ರ ಪ್ರಭು ರವರು ತಿಳಿಸಿದರು.