ಹಿರಿಯ ಯಕ್ಷಗಾನ ಕಲಾವಿದ ಉಮೇಶ್ ಶೆಟ್ಟಿ ಉಬರಡ್ಕರಿಗೆ ಸನ್ಮಾನ
ನಿನಾದ ಸಾಂಸ್ಕೃತಿಕ ಕೇಂದ್ರ ತಂಟೆಪ್ಪಾಡಿ ಇಲ್ಲಿ ಮಹಿಳಾ ಭಾಗವತರಿಂದ “ಯಕ್ಷಗಾನ ಗಾನ ವೈಭವ” ಹಾಗೂ ಮಕ್ಕಳ ತಂಡದಿಂದ “ಸತಿ ಹೈಮಾವತಿ” ಎಂಬ ಯಕ್ಷಗಾನ ನ.10 ರಂದು ನಡೆಯಿತು, ಹಾಗೂ ಹಿರಿಯ ಯಕ್ಷಗಾನ ಕಲಾವಿದ ಉಮೇಶ್ ಶೆಟ್ಟಿ ಉಬರಡ್ಕರಿಗೆ ಗೌರವ ಸನ್ಮಾನ ನಡೆಯಿತು.
ಮಹಿಳಾ ಭಾಗವತರುಗಳಾದ ಶ್ರೀಮತಿ ಭವ್ಯಶ್ರೀ ಕುಲ್ಕುಂದ, ಕುl ಹೇಮಸ್ವಾತಿ ಕುರಿಯಾಜೆ, ಕುl ರಚನಾ ಚಿದ್ಗಲ್ಲು, ಕುl ಅಭಿಜ್ಞಾ ಭಟ್ ನಾಟಿಕೇರಿ ಇವರುಗಳಿಂದ “ಯಕ್ಷಗಾನ ಗಾನ ವೈಭವ” ನಡೆಯಿತು. ಚೆಂಡೆಯಲ್ಲಿ ವಂದನಾ ಮಾಲೆಂಕಿ, ಮದ್ದಲೆಯಲ್ಲು ಶ್ರಾವ್ಯ ತಲೆಕಳ ಭಾಗವಹಿಸಿದ್ದರು. ಗಾನ ವೈಭವದ ಬಳಿಕ ಯುವಕ ಮಂಡಲ ಕಳಂಜ ಹಾಗೂ ನಿನಾದ ಸಾಂಸ್ಕೃತಿಕ ಕೇಂದ್ರ ತಂಟೆಪ್ಪಾಡಿ ಜಂಟಿ ಆಶ್ರಯದಲ್ಲಿ ತರಬೇತಿಗೊಂಡ ಮಕ್ಕಳ ಯಕ್ಷಗಾನ ತಂಡದಿಂದ ‘ಸತೀ ಹೈಮಾವತಿ”
ಯಕ್ಷಗಾನ ನಡೆಯಿತು. ಗಾನ ವೈಭವದ ಬಳಿಕ
ಹಿರಿಯ ಯಕ್ಷಗಾನ ಕಲಾವಿದರಾದ ಉಮೇಶ್ ಶೆಟ್ಟಿ ಉಬರಡ್ಕ ಅವರಿಗೆ ಗೌರವ ಸನ್ಮಾನ ನಡೆಯಿತು.
ವೇದಿಕೆಯಲ್ಲಿ ನಿನಾದ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಐತ್ತಪ್ಪ ಶೆಟ್ಟಿ, ಕಾರ್ಯದರ್ಶಿ ವಸಂತ ಶೆಟ್ಟಿ, ಕೆಂದ್ರ ಸಚಿವಾಲಯದ ಗಂಥಾಲಯ ವರಿಷ್ಠಾಧಿಕಾರಿ ಡಾl ಅವನೀಂದ್ರನಾಥ ರಾವ್, ನಿನಾದ ಸಾಂಸ್ಕೃತಿಕ ಕೇಂದ್ರದ ನಿರ್ದೇಶಕರಾದ ಪ್ರಮೋದ್ ಬೆಳ್ಳಾರೆ , ಹಿತೈಷಿ ಶೆಟ್ಟಿ, ಕಳಂಜ ಯುವಕ ಮಂಡಲದ ಅಧ್ಯಕ್ಷ ಶಿವರಾಮ ಕಜೆಮೂಲೆ, ಕಾರ್ಯದರ್ಶಿ ರಮೇಶ್ ಕೋಡಿಯಡ್ಕ ಮತ್ತಿತರು ಉಪಸ್ಥಿತರಿದ್ದರು. ವಿನಯ ವಿ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು.